Kannada NewsKarnataka NewsLatest

ವಿಕಲಚೇತನರ ಬಗ್ಗೆ ಪೋಷಕರಿಗೆ ವಿಶೇಷ ಕಾಳಜಿಯಿರಲಿ: ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಕಲಚೇತನರು ದೇವರ ಮಕ್ಕಳಿದ್ದಂತೆ ಅವರನ್ನು ನಾವು ನಮ್ಮ ಕುಟುಂಬದವರಂತೆ ಕಾಣುವ ಮುಖೇನ ಅವರ ಏಳಿಗೆಗಾಗಿ ಶ್ರಮಿಸಬೇಕು ಎಂದು ಬೆಳಗಾವಿ ಗ್ರಾಮಿಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದರು.

ಅವರು ತಮ್ಮ ಗೃಹ ಕಚೇರಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೂವರು ವಿಕಲಚೇತನರಿಗೆ ಕ್ಷೇತ್ರದ ವಿವಿಧ ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ತ್ರಿಚಕ್ರ ವಾಹನಗಳನ್ನು ಹಸ್ತಾಂತರಿಸಿ ಮಾತನಾಡಿದರು.

ವಿಕಲಚೇತನರ ಬಗ್ಗೆ ಅವರವರ ಪೋಷಕರಿಗೆ ವಿಶೇಷ ಕಾಳಜಿಯಿರಬೇಕು, ವಿಕಲಚೇತನರ ಅನುಕಂಪದ ಜೊತೆಗೆ ಅವರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ನೀಡಿ ಸಮಾಜದಲ್ಲಿ ಎಲ್ಲರಂತೆ ಮುಂದೆ ಬರಲು ನಾವೆಲ್ಲರೂ ಸೇರಿ ಅನುವು ಮಾಡಿಕೊಡಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ನಾಗೇಶ ದೇಸಾಯಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಬಾಗಣ್ಣ ನರೋಟಿ ಹಾಗೂ ವಿವಿಧ ಗ್ರಾಮಗಳ ಮುಖಂಡರು, ಪಕ್ಷದ ಕಾರ್ಯಕರ್ತರು, ಆಪ್ತ ಸಹಾಯಕರು ಉಪಸ್ಥಿತರಿದ್ದರು.

Home add -Advt

ಶಿಕ್ಷಕರ ನೇಮಕಾತಿ ಹಗರಣ; 30ಕ್ಕೂ ಹೆಚ್ಚು ಶಿಕ್ಷಕರು ವಶಕ್ಕೆ

Related Articles

Back to top button