Latest

ಸಾರ್ವಜನಿಕರಿಗೆ ವಂಚನೆ; ಇಬ್ಬರ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಾರ್ವಜನಿಕರಿಗೆ ವಂಚಿಸಿ ಹಣ ದೋಚುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಎ-1 ಮಹ್ಮದಬ್ಬಾಸ ಹುಸೇನ್ ಶೇಖ (ವ.55) ಮತ್ತು ಈತನ ಮಗನಾದ ಎ-2 ಮಹ್ಮದಶಾಹಿದ ಮಹ್ಮದಬ್ಬಾಸ ಶೇಖ (ವ.28) ಎಂಬ ಇಬ್ಬರನ್ನು ಬಂಧಿಸಲಾಗಿದೆ.

ಇಬ್ಬರೂ ಆರೋಪಿಗಳು ಅಜಮನಗರ 4 ನೇ ಕ್ರಾಸ್ ನಿವಾಸಿಗಳಾಗಿದ್ದು, ಬೆಳಗಾವಿ ನಗರದ ಹಲವು ಕಡೆಗಳಲ್ಲಿ ಅಪಾರ್ಟಮೆಂಟ್ ಮತ್ತು ಕಾಂಪ್ಲೆಕ್ಸ್ ಗಳನ್ನು ಕಟ್ಟಿ ಮಾರಾಟ ಮಾಡುವುದಾಗಿ ಸಾರ್ವಜನಿಕರಿಗೆ ಹೇಳಿ,ಅವರಿಂದ ನಗದು ಹಣವನ್ನು ಪಡೆದುಕೊಂಡು ತಲೆಮರೆಸಿಕೊಂಡು ಓಡಾಡಿಕೊಂಡಿದ್ದರು.

Home add -Advt

ಮಾ.30 ರಂದು ಖಚಿತ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ನಂತರ ದಸ್ತಗೀರಿ ಮಾಡಿ,ವಿಚಾರಣೆ ನಡೆಸಲಾಗಿದೆ.
ಸದ್ಯ ಆರೋಪಿಗಳನ್ನು ಬೆಳಗಾವಿಯ 4 ನೇ ಜೆಮ್ಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ತನಿಖೆ ಕೈಗೊಳ್ಳಲಾಗುತ್ತಿದೆ.

ಪೊಲೀಸ್ ಅಧೀಕ್ಷಕರಾದ ಡಾ.ಭೀಮಾಶಂಕರ ಗುಳೇದ, ಐಪಿಎಸ್ ಸಿಐಯು, ಸಿಐಡಿ ಬೆಂಗಳೂರು ಅವರ ಮಾರ್ಗದರ್ಶನದಂತೆ ಈ ಪ್ರಕರಣದ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್‌ಪೆಕ್ಟರ್ ಶಿವಪ್ಪ ಕೆ. ಕುರಗೋಡಿ ಎನ್ ಡಿಸಿ, ಸಿಐಡಿ ಬೆಳಗಾವಿ ಘಟಕ ಅವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಮೊಕದ್ದಮೆಯು ಬಹುಕೋಟಿ ವಂಚನೆ ಪ್ರಕರಣವಾಗಿರುವುದರಿಂದ ಮುಂದಿನ ತನಿಖೆಗಾಗಿ ಸಿಐಡಿಗೆ ವರ್ಗಾವಣೆಯಾಗಿ ತನಿಖಾ ಹಂತದಲ್ಲಿದೆ.

ಆರೋಪಿತರ ಪತ್ತೆ ಹಾಗೂ ದಸ್ತಗೀರಿ ಕಾರ್ಯದಲ್ಲಿ ಸಿಐಡಿ, ಎನ್ ಡಿ ಸಿ ಬೆಳಗಾವಿ ಘಟಕದ ಸಿಬ್ಬಂದಿಗಳಾದ ಜಗದೀಶ ಬಾಗನವರ ಸಿಎಚ್ ಸಿ- 7702 , ಜಿ. ಆರ್. ಶಿರಸಂಗಿ ಸಿಎಚ್ ಸಿ- 1241, ಚಿದಂಬರ ಚಟ್ಟರಕಿ ಸಿಪಿಸಿ- 11827, ಪ್ರಭುದೇವ ದಾವಣಗೆರೆ ಎಎಚ್ ಸಿ- 247 , ಮಂಜುನಾಥ ಅಸುಂಡಿ ಸಿಪಿಸಿ- 2299 ಅವರು ಭಾಗವಹಿಸಿದ್ದರು.

Related Articles

Back to top button