ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಹತ್ತು ದಿನಗಳ ಕಾಲ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದೆ.
ಕಲಾಪ ಆರಂಭಕ್ಕೂ ಮುನ್ನ ವಿಧಾನಸಭೆ ಹಾಲ್ ನಲ್ಲಿ ಸ್ವಾಮಿ ವಿವೇಕಾನಂದ, ಬಸವಣ್ಣ, ಮಹಾತ್ಮಾ ಗಾಂಧೀಜಿ, ವೀರ ಸಾವರ್ಕರ್, ಡಾ.ಬಿ.ಆರ್.ಅಂಬೇಡ್ಕರ್, ಸುಭಾಷ ಚಂದ್ರಬೋಸ್ ಸೇರಿದಂತೆ ಹಲವು ಮಹನೀಯರ ಭಾವಚಿತ್ರ ಅನಾವರಣ ಮಾಡಲಾಯಿತು. ಬಳಿಕ ವಿಧನಸಭೆ ಹಾಗು ಪರಿಷತ್ ನಲ್ಲಿ ಕಲಾಪ ಆರಂಭವಾಯಿತು.
ಕಲಾಪದಲ್ಲಿ ಮೊದಲಿಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಇತ್ತೀಚೆಗೆ ನಿಧನರಾದ ಆನಂದ್ ಮಹಾಮನಿ, ಮುಲಾಯಂ ಸಿಂಗ್ ಯಾದವ್, ಕುಂಬಳೆ ಸುಂದರ್ ರಾವ್, ಶ್ರೀಶೈಲಪ್ಪ ಬಿದರೂರು, ಜಬ್ಬಾರ್ ಖಾನ್ ಹೊನ್ನಳ್ಳಿ ಸೇರಿದಂತೆ ಹಲವು ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಬಳಿಕ ಉಭಯಸದನಗಳ ಕಾಲಪವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.
*ಸುವರ್ಣಸೌಧದಲ್ಲಿ ಬಸವಣ್ಣ, ವೀರ ಸಾವರ್ಕರ್ ಸೇರಿ 7 ಮಹನೀಯರ ಫೋಟೋ ಅನಾವರಣ*
https://pragati.taskdun.com/belagavisuvarnavidhanasoudhasavarkar-photocm-basavaraj-bommaai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ