Kannada NewsKarnataka NewsLatest

ನಾಳೆ ಹಲವೆಡೆ ಕೊರೋನಾ ಪರಿಸ್ಥಿತಿ ಪರಿಶೀಲಿಸಲಿದ್ದಾರೆ ಶಾಸಕ ದೊಡ್ಡಗೌಡ್ರ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು – ಕಿತ್ತೂರು ಮತ ಕ್ಷೇತ್ರದ ಶಾಸಕ ಮಹಾಂತೇಶ  ದೊಡ್ಡಗೌಡರ್  ಭಾನುವಾರ  ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಂಡ ಕ್ರಮಗಳ ಪರೀಶೀಲನೆ ಹಾಗೂ ವಿವಿಧ ಸಮಸ್ಯೆಗಳ ಪರಿಶೀಲನೆಗೆ ವಿವಿಧ  ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 10:30ಕ್ಕೆ ಮೇಕಲಮರ್ಡಿ, 11ಕ್ಕೆ  ವಣ್ಣೂರ, 11:30ಕ್ಕೆ ವಣ್ಣೂರ ಸರ್ಕಾರಿ ಆಸ್ಪತ್ರೆ, ಮಧ್ಯಾಹ್ನ 12ಕ್ಕೆ  ಹಣಬರಟ್ಟಿ, 1ಕ್ಕೆ ಮಲ್ಲಾಪುರ ಕೆ.ಎನ್, 1:30ಕ್ಕೆ ದೇಶನೂರಿಗೆ ಭೇಟಿ ನೀಡಲಿದ್ದಾರೆ.
  ಆಯಾ ಗ್ರಾಮಗಳಲ್ಲಿ ಸಂಬಂಧಪಟ್ಟ ತಾಲೂಕಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು,  ಗ್ರಾ.ಪಂ ವ್ಯಾಪ್ತಿಯ ಟಾಸ್ಕ್ ಫೋರ್ಸ್ ಕಮೀಟಿ ಸದಸ್ಯರು ಕಡ್ಡಾಯವಾಗಿ ಹಾಜರಿದ್ದು  ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಶಾಸಕರು ಕೋರಿದ್ದಾರೆ.

Related Articles

Back to top button