ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸ್ಕಾಲರ್ ಶಿಪ್ ಹಣ ತರುವುದಾಗಿ ಹೇಳಿ ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
22 ವರ್ಷದ ಶೃತಿ ರಾಮಾ ಖಜಗೋನಟ್ಟಿ ನಾಪತ್ತೆಯಾಗಿರುವ ಕಾಲೇಜು ವಿದ್ಯಾರ್ಥಿನಿ. ಜನವರಿ 5ರದು ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಣ್ಣಿಗೇರಿಯಿಂದ ಬೆಳಗಾವಿ ನಗರಕ್ಕೆ ಬಂದ ಯುವತಿ ಮರಳಿ ಮನೆಗೆ ಹೋಗಿಲ್ಲ.
ಈ ಕುರಿತು ಯುವತಿ ತಂದೆ ರಾಮಾ ಯಶವಂತ ಖಜಗೋನಟ್ಟಿ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಡಾರ, ರೂಬೆಲ್ಲಾ ವ್ಯಾಕ್ಸಿನ್ ವ್ಯತಿರಿಕ್ತ ಪರಿಣಾಮವೇ ಮಕ್ಕಳ ಸಾವಿಗೆ ಕಾರಣ…?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ