Uncategorized

*ಬೆಳಗಾವಿ; ಬಸ್ ನಲ್ಲಿ ಸಾಗಿಸುತ್ತಿದ್ದ 27.34 ಲಕ್ಷ ಹಣ ಜಪ್ತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕುರುಡು ಕಾಂಚಾಣದ ಸದ್ದು ಜೋರಾಗಿದ್ದು, ಬಸ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 27 ಲಕ್ಷಕ್ಕೂ ಅಧಿಕಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿಯ ಬಾಚಿ ಚೆಕ್ ಪೋಸ್ಟ್ ನಲ್ಲಿ ಮಹಾರಾಷ್ಟ್ರದ ಸಾರಿಗೆ ಸಂಸ್ಥೆಯ ಬಸ್ ತಪಾಸಣೆ ನಡೆಸಿದಾಗ, ಸೂಕ್ತ ದಾಖಲೆಗಳಿಲ್ಲದ 27 ಲಕ್ಷದ 34 ಸಾವಿರ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ.

Home add -Advt

ಬಸ್ ನಲ್ಲಿ ಪಾಂದುರಂಗ ಎಂಬುವವರು ಹಣ ಸಾಗಿಸುತ್ತಿದ್ದರು. ಹಣವನ್ನು ಜಪ್ತಿ ಮಾಡಿಕೊಂಡಿರುವ ಬೆಳಗಾವಿ ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Back to top button