Latest

*ಜವಳಿ ಪಾರ್ಕ್ ನಿಂದ 2 ಲಕ್ಷ ಉದ್ಯೋಗ; ಸಿಎಂ ಬೊಮ್ಮಾಯಿ ಭರವಸೆ*

ಪ್ರಗತಿವಾಹಿನಿ ಸುದ್ದಿ; ಕಲಬುರಗಿ : ಪಿಎಂ ಮಿತ್ರ ಜವಳಿ ಪಾರ್ಕ್ 371 ಜೆ ಆದ ನಂತರ ಆಗಿರುವ ಮೆಗಾ ಯೋಜನೆ. ಒಂದು ಸಾವಿರ ಎಕರೆ ಪ್ರದೇಶದಲ್ಲಿ 10 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ಹೂಡಿಕೆಯಾಗಲಿದ್ದು. ಒಂದು ಲಕ್ಷ ನೇರ ಹಾಗೂ ಒಂದು ಲಕ್ಷ ಪರೋಕ್ಷ ಉದ್ಯೋಗ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಜವಳಿ ಪಾರ್ಕ್ ಈ ಭಾಗದ ಆರ್ಥಿಕ ಪ್ರಗತಿಗೆ ದೊಡ್ಡ ಶಕ್ತಿಯನ್ನು ತುಂಬಿದೆ. ಯುವಕರಿಗೆ ವಲಸಿಗರು ಉದ್ಯೋಗ ದೊರೆತು, ರಫ್ತು ಕೂಡ ಆಗಲಿದೆ. ಇತರೆ ಚಟುವಟಿಕೆಗಳು ಗರಿಗೆದರಲಿವೆ. ಕಲಬುರ್ಗಿ ನಗರದಲ್ಲಿ ವಿಮಾನ ನಿಲ್ದಾಣ, ಸಂಪೂರ್ಣ ಆರ್ಥಿಕ ವಾತಾವರಣ ದೊಡ್ಡ ಮಟ್ಟದಲ್ಲಿ ಆಗಲಿದೆ ಎಂದರು.

Related Articles

Back to top button