ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮೂವರು ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಚುಚ್ಚು ಮದ್ದಿನ ವ್ಯತಿರಿಕ್ತ ಪರಿಣಾಮವೇ ಕಾರಣ ಎಂಬ ಮಾಹಿತಿ ಪ್ರಾತಿಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಕುರಿತು ಬೆಳಗಾವಿ ಜಿಲ್ಲಾ ಡಿಹೆಚ್ ಒ ಡಾ.ಎಸ್.ವಿ.ಮುನ್ಯಾಳ್, ಬೋಚಬಾಳ ಗ್ರಾಮದ 21 ಮಕ್ಕಳಿಗೆ ಜನವರಿ 12ರಂದು ಲಸಿಕೆ ನೀಡಲಾಗಿತ್ತು. ದಡಾರ, ರುಬೆಲ್ಲಾ ಚುಚ್ಚುಮದ್ದು ಹಾಕಲಾಗಿತ್ತು. 21 ಮಕ್ಕಳ ಪೈಕಿ ನಾಲ್ವರು ಮಕ್ಕಳಿಗೆ ಚುಚ್ಚುಮದ್ದು ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಅಸ್ವಸ್ಥರಾಗಿದ್ದಾರೆ. ಅವರಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ. ಆದರೆ ಮರಣೋತ್ತರ ಪರೀಕ್ಷೆ ಬಳಿಕ ಖಚಿತ ಮಾಹಿತಿ ಲಭ್ಯವಾಗಲಿದೆ. ಲಸಿಕೆ ಪರಿಣಾಮದಿಂದಲೇ ಘಟನೆ ನಡೆದಿಯೇ ಎಂಬುದನ್ನು ಸಮಿತಿ ಪರಿಶೀಲಿಸಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಪ್ರಕರಣದ ತನಿಖೆಗೆ ಅದೇಶಿಸಲಾಗಿದೆ. ತಪ್ಪು ಯಾರೇ ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮಕ್ಕಳಿಗೆ ಲಸಿಕೆ ಹಾಕಿಸಿದ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಲಕ್ಷಕ್ಕೆ ಒಂದೆರಡು ಘಟನೆಯಲ್ಲಿ ಇಂತಹ ಅಡ್ಡಪರಿಣಾಮ ಬೀರುತ್ತದೆ. ಮಾರಕ ರೋಗಗಳ ತಡೆಗೆ ನೀಡುವ ಎಲ್ಲಾ ಲಸಿಕೆಗಳನ್ನು ಮಕ್ಕಳಿಗೆ ಹಾಕಿಸಬೇಕು. ಈ ನಿಟ್ಟಿನಲ್ಲಿ ಆತಂಕ ಬೇಡ ಎಂದು ಹೇಳಿದರು.
ಮೂವರು ಪುಟ್ಟ ಮಕ್ಕಳ ನಿಗೂಢ ಸಾವು; ಜಿಲ್ಲೆಯಲ್ಲಿ ಹೆಚ್ಚಿದ ಆತಂಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ