Kannada NewsLatest

ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು: ಡಾ.ಎ.ಬಿ ಪುಂಡಲಿಕ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಸರಕಾರಿ ಯೋಜನೆಗಳು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವುದಕ್ಕಾಗಿ ಇರುತ್ತವೆ ಆದರಿಂದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ.ಎ ಬಿ ಪುಂಡಲಿಕ ಹೇಳಿದರು.

ನಗರದ ಶ್ರೀಮತಿ ಉಷಾತಾಯೆ ಗೋಗಟೆ ಶಾಲೆಯಲ್ಲಿ ಆಯೋಜಿಸಿದ ಶಾಲಾ ಸಿದ್ದಿ ಯೋಜನೆಯ ತರಬೇತಿಯಲ್ಲಿ ಮಾತನಾಡಿದರು. ಈ ತರಬೇತಿಯಲ್ಲಿ ಬೆಳಗಾವಿ ನಗರದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಸರಕಾರಿ ಶಾಲೆಗಳ ಭೌತಿಕ ಸ್ಥಿತಿ ಹಾಗೂ ಶಾಲೆಗಳಲ್ಲಿ ಇರುವ ಅನುಕೂಲತೆ ಸದುಪಯೋಗ ಬಗ್ಗೆ ಸಲಹೆ ನೀಡಿದರು. ಶಾಲೆಗಳು ಸ್ವಚ್ಚ, ಸುಂದರ ಹಾಗೂ ಪಾಲಕರಿಗೆ ಮತ್ತು ಮಕ್ಕಳಿಗೆ ಆಕರ್ಷಕವಾಗಿರಲಿ. ಶಿಕ್ಷಕರಲ್ಲಿ ಶಿಸ್ತು ಇರಲಿ ಮತ್ತು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರ ವಲಯ ಕ್ಷೇತ್ರ – ಶಿಕ್ಷಣಾಧಿಕಾರಿಗಳಾದ ರವಿ ಬಜಂತ್ರಿ, ಕ್ಷೇತ್ರ ಸಮನ್ವಯ ಅಧಿಕಾರಿಗಳು ಡಾ ರಾಜಶೇಖರ್ ಚಳಗೇರಿ, ಬಿಆರ್ ಪಿ ಗಳಾದ ರಿಜವನ್ ನವಾಗೇಕರ್, ಭಾರತಿ ನರಸನ್ನವರ್, ಸಂತೋಷ್ ವಾಲಿ ಸಂಪನ್ಮೂಲ ವ್ಯಕ್ತಿಗಳಗಿ ಸಂಜಯ್ ಪಾಟೀಲ್, ಆರ್ ಆರ್ ಮೋರೆ, ಗಿರೀಶ ಜಗಜಂಪ್ಪಿ, ಎಸ್ ವಿ ಸೊಂಟಕ್ಕೆ, ಆರ್ ಎಸ್ ಹಂಚಿನಮನಿ , ಶೋಭಾ ಹಿರೇಮಠ್ , ರಾಜಶೇಖರ್ ನೆಗಿನಹಾಳ ಉಪಸ್ಥಿರಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button