Kannada NewsLatest

ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಂಬೇಡ್ಕರ್‌ ಭವನ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹೊಸ ವಂಟಮುರಿ ಗ್ರಾಮದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಹಿರಿಯರು ಸಹಕಾರ ನೀಡಿದ್ದರಿಂದ ಇಂದು ಗ್ರಾಮದಲ್ಲಿ ಅಚ್ಚುಕಟ್ಟಾಗಿ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

ಹೊಸ ವಂಟಮುರಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಂಬೇಡ್ಕರ್‌ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಅಂಬೇಡ್ಕರ್‌ ಭವನ ಬಹಳ ಅವಶ್ಯಕತೆ ಇತ್ತು. ಇಷ್ಟು ದಿನ ಸ್ಥಳ ಸಿಗದೆ ಭವನ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ನಿಮ್ಮ ಬಹು ದಿನಗಳ ಬೇಡಿಕೆ ಈಡೇರಿದೆ ಎಂದು ತಿಳಿಸಿದರು.

ಈ ಭವನ ಎಲ್ಲಾ ಸಮಾಜದ ಕಾರ್ಯಕ್ರಮಗಳು ನಡೆಯಲು ಅನುಕೂಲವಾಗಬೇಕು ಎಂದ ಅವರು, ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಇಂದು ರಾಜೀವ ಗಾಂಧಿ ಸೇವೆ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗೌಸ್ ಪೀರ್ ಮೊಹಮ್ಮದ್, ಆರೀಫ್ ಮುಲ್ಲಾ, ದಾದಾನಸಾಬ್ ಹುಸೇನ್ಸಾಬ್ ಬಸ್ಸಾಪುರಿ, ಆಸಿಫ್ ಬಸ್ಸಾಪುರಿ, ಎಲ್.ಎನ್. ಪಾಟೀಲ್, ಶಿವಪ್ಪ ಹುನ್ನೂರಿ, ಮಾರುತಿ ಮಾಸ್ತಿ, ಹಣಮಂತ ಮುದಗ್ನವರ್, ಸಿದ್ದಪ್ಪ ಹೋಳಿಕರ್, ಮಂಜುಗೌಡ ಪಾಟೀಲ್, ರಫಿದ್ ರಾಮಣ್ಣ ಗುಳ್ಳಗಾರ್, ರಫಿದ್ ರಾಮಣ್ಣ ಗುಳ್ಳಗಾರ್ ಸೇರಿದಂತೆ ಇತರರು ಇದ್ದರು.
3ನೇ ಅಲೆಯಲ್ಲಿ ಮೊದಲಬಾರಿಗೆ ಬೆಳಗಾವಿಯಲ್ಲಿ 500 ದಾಟಿದ ಕೊರೋನಾ ಸೋಂತರ ಸಂಖ್ಯೆ ; ಒಂದು ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button