ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಶಮನೇವಾಡಿ ಗ್ರಾಮದಲ್ಲಿ , ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ ಸುಮಾರು 80 ಲಕ್ಷ ರೂ. ಮೊತ್ತದಲ್ಲಿ, ಚಿಕ್ಕೋಡಿ -ಇಂಚಲಕರಂಜಿ ರಸ್ತೆಯಿಂದ ಶಮನೇವಾಡಿ ಗ್ರಾಮದವರೆಗೆ 1.5 ಕಿ.ಮೀ. ರಸ್ತೆ ಅಗಲೀಕರಣ ಮತ್ತು ಸುಧಾರಣಾ ಕಾಮಗಾರಿಗಳಿಗೆ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಭೂಮಿ ಪೂಜೆ ನೆರವೇರಸಿ, ಚಾಲನೆ ನೀಡಿದರು.
ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಈ ಭಾಗದ ಜನರ ಮನವಿಗೆ ಸ್ಪಂದಿಸಿ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಇದೇ ರೀತಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಮತ್ತಷ್ಟು ರಸ್ತೆಗಳಲ್ಲಿ ಪ್ರಗತಿ ಕಾರ್ಯ ಮಾಡಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು.
ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಸೇರಿದಂತೆ ಹಲವಾರು ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಪಣ ತೊಡುತ್ತಿದೆ. ಕ್ಷೇತ್ರಕ್ಕೆ ಮೂಲಸೌಕರ್ಯ ಒದಗಿಸಲು ಬದ್ಧನಾಗಿದ್ದು, ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಜಯಕುಮಾರ ಖೋತ, ಅಣ್ಣಾಸಾಹೇಬ ಭೆಂಡವಾಡೆ, ಜಯಕುಮಾರ ಹೆರಗೆ, ಜಿತೇಂದ್ರ ಖೋತ, ಪಿಂಟು ಖೋತ, ರವಿ ಸಾವಜಿ, ಭರತ ಖೋತ, ಅಭಿಷೇಕ ಖೋತ, ಮಂಜು ಕಾಂಬಳೆ, ಸಂಜನಾ ಕಾಂಬಳೆ, ಮಹಾವೀರ ಪೂಜಾರಿ, ಮಾಳಪ್ಪ ಗಾವಡೆ, ಅಣ್ಣಾಸಾಬ ತಾರದಾಳೆ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಇನ್ನಷ್ಟು ಕಠಿಣ ನಿಯಮ ಜಾರಿ; ಸಿಎಂ ಘೋಷಣೆ
ಗೆಲುವಿಗೆ ಕಾರ್ಯಕರ್ತರ ಒಗ್ಗಟ್ಟು ಕಾರಣ: ಕೆಪಿಸಿಸಿ ಕಾರ್ಯಾಧ್ಯಕ್ಷ, ಸತೀಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ