
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಪಾತ್ರೆ ತೊಳೆಯಲೆಂದು ಬಕೆಟ್ ನಲ್ಲಿ ತುಂಬಿಟ್ಟಿದ್ದ ನೀರಿಗೆ ಬಿದ್ದು ಒಂದುವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಸನದಿ ತೋಟದಲ್ಲಿ ವಾಸವಿರುವ ನಿಂಗಪ್ಪ ಮಸರಗುಪ್ಪಿ ಅವರ ಒಂದೂವರೆ ವರ್ಷದ ಮಗು ವಿಜಯ ಮೃತಪಟ್ಟ ಕಂದಮ್ಮ.
ಅಂಗಳದಲ್ಲಿ ಆಟವಾಡುತ್ತ ಇದ್ದ ಮಗು ಪಾತ್ರೆತೊಳೆಯಲೆಂದು ಬಕೆಟ್ ನಲ್ಲಿ ಇಟ್ಟಿದ್ದ ನೀರಿಗೆ ಬಿದ್ದಿದೆ. ತಾಯಿ ಅಡುಗೆ ಮನೆಯಿಂದ ಹೊರಬಂದು ಮಗು ಕಾಣಿಸದಿದ್ದಾಗ ಕಂಗಾಲಾಗಿದ್ದಾರೆ. ಬಕೆಟ್ ನಲ್ಲಿ ಮಗು ತಲೆಕೆಳಗಾಗಿ ಮುಳುಗಿರುವುದನ್ನು ಗಮನಿಸಿದ್ದಾರೆ. ತಕ್ಷಣ ಮಗುವನ್ನು ಮೇಲಕ್ಕೆತ್ತಿದ್ದಾರೆ. ಆದರೆ ಅಷ್ಟರಲ್ಲಿ ಮಗು ಕೊನೆಯುಸಿರೆಳೆದಿದೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ