ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಬೆನಾಡಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯನ್ನು ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು.
ಬೆನಾಡಿ ಗ್ರಾಮದಲ್ಲಿ ಸಚಿವೆ ಶಶಿಕಲಾ ಜೋಲ್ಲೆ ಇವರ ವಿಶೇಷ ಪ್ರಯತ್ನದಿಂದ ಮಂಜೂರಾದ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ನಬಾರ್ಡ ಆರ್.ಆಯ.ಡಿ.ಎಫ್-25 ಯೋಜನೆಯಡಿ 36 ಲಕ್ಷ ರೂಪಾಯಿ ಅನುದಾನದ 3 ಶಾಲಾ ಕೊಠಡಿ ಹಾಗೂ ಆಡಿ ಗ್ರಾಮದಲ್ಲಿ ನಬಾರ್ಡ ಆರ್.ಆಯ.ಡಿ.ಎಫ್-25 ಯೋಜನೆಯಡಿ 11 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ 1 ಶಾಲಾ ಕೊಠಡಿ ಹಾಗೂ ಹಂಚಿನಾಳ ಗ್ರಾಮದಲ್ಲಿ ನಬಾರ್ಡ ಆರ್.ಆಯ.ಡಿ.ಎಫ್-25 ಯೋಜನೆಯಡಿ 44 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ 4 ಶಾಲಾ ಕೊಠಡಿಯನ್ನು ಉದ್ಘಾಟಿಸಿ, ಮಾತನಾಡಿ ಕ್ಷೇತ್ರದಲ್ಲಿ ಪ್ರತಿ ಮಕ್ಕಳು ಶಿಕ್ಷಣ ಪಡೆಯಬೇಕು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನನ್ನ ಆಶಯ. ಹೀಗಾಗಿ ಗುಣಮಟ್ಟದ ಶಿಕ್ಷಣ ನೀಡಲು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲಕರವಾಗುವಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಲು ಆದ್ಯತೆ ನೀಡುತ್ತಿದ್ದೇನೆ ಎದರು.
ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಶಾಲೆ ಎನ್ನುವುದು ಹೂದೋಟವಿದ್ದಂತೆ. ಅಲ್ಲದೇ ಸರ್ಕಾರಿ ಶಾಲೆಗಳು ಈ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತೆರೆದಿಟ್ಟ ಪುಸ್ತಕಗಳಾಗಿರಬೇಕು. ಇಂತಹ ವಾತಾವರಣ ನಿರ್ಮಿಸಲು ಶಾಲೆಗಳಿಗೆ ಅಗತ್ಯ ಕೊಠಡಿಗಳು, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛ ಪರಿಸರ, ಶೌಚಾಲಯ ಸೇರಿದಂತೆ ಸರಿಯಾದ ಮೂಲಭೂತ ಸೌಕರ್ಯಗಳು ದೊರೆಯಬೇಕು. ಕ್ಷೇತ್ರದ ಪ್ರತಿಯೊಂದು ಸರ್ಕಾರಿ ಶಾಲೆಗಳು ಸಕಲ ಸೌಲಭ್ಯಗಳನ್ನು ಪಡೆಯಬೇಕೆಂಬ ಮಹದಾಸೆ ನನ್ನದು ಎಂದು ಹೇಳಿದರು.
ಈ ವೇಳೆ ಮಾತನಾಡಿದ ಬಿಜಿಪಿ ಗ್ರಾಮೀಣ ಅಧ್ಯಕ್ಷ ಪವನ ಪಾಟೀಲ ಬೆನಾಡಿ ಗ್ರಾಮದಲ್ಲಿ ಶಾಲಾ ಕೋಣೆ ನಿರ್ಮಾಣ, ಶುದ್ಧ ಕುಡಿಯುವ ನೀರು, ಸಮುದಾಯ ಭವನಗಳು, ಅಂಗಣವಾಡಿ ಕಟ್ಟಡ, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೋಳಿಸಿ ಸಚಿವರು ಗ್ರಾಮವನ್ನು ಅಭಿವೃದ್ಧಿಯಲ್ಲಿ ಮಾದರಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಪವನ ಪಾಟೀಲ, ರಮೇಶ ಪಾಟೀಲ, ಪಾಂಡು ಪಾಟೀಲ, ರಾಜು ದಿವಟೆ, ಬಾಳಸಾಬ ದೇಸಾಯಿ, ರಾಜಶ್ರೀ ಪಾಟೀಲ, ರಾವಸಾಬ ಜನವಾಡೆ, ವಿಠ್ಠಲ ನಾಯಿಕ, ಸಾವಿತ್ರಿ ತಂಗಡೆ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನಿಪ್ಪಾಣಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ