
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಭತ್ತದ ನಾಟಿಗಾಗಿ ಭೂಮಿ ಸಿದ್ಧಗೊಳಿಸುವ ಸಂದರ್ಭದಲ್ಲಿ ರೋಟೋವೇಟರ್ ಮಗುಚಿಬಿದ್ದಿದ್ದರಿಂದ ರೋಟೋವೇಟರ್ ಚಾಲಕ ಅದರಡಿ ಸಿಲುಕಿ ಮೃತಪಟ್ಟ ಘಟನೆ ತಾಲ್ಲೂಕಿನ ಬೇಕವಾಡ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.
ಮೃತರನ್ನು ಮೂಲತಃ ಹಾವೇರಿ ಜಿಲ್ಲೆಯ ವೃಷಭ ಯರನಾಳ (22) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಸ್ಥಳೀಯರು ಜೆಸಿಬಿ ಬಳಸಿ ರೋಟೋವೇಟರ್ ಅಡಿ ಸಿಲುಕಿದ್ದ ಚಾಲಕನ ಮೃತದೇಹ ಹೊರ ತೆಗೆದಿದ್ದಾರೆ.
ಅಧಿಕಾರ ಹೋದ್ರೆ ಹೋಗಲಿ, ಗೂಟ ಹೋಯ್ತು ಅಂದುಕೊಳ್ತೀನಿ; ಈಶ್ವರಪ್ಪ ಕಿಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ