*ಬೀರೇಶ್ವರ ಸಹಕಾರಿ ಸಂಸ್ಥೆಯ ಸದಸ್ಯರಿಗೆ 12% ಲಾಭಾಂಶ ವಿತರಣೆ*
ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ ಮಾಹಿತಿ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಯಕ್ಸಂಬಾ ಪಟ್ಟಣದ ಬೀರೇಶ್ವರ ಸಹಕಾರಿಯ ಸಭಾಗೃಹದಲ್ಲಿ ಅಧ್ಯಕ್ಷ ಜಯಾನಂದ ಜಾಧವ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಸಹಕಾರಿಯ ಸದಸ್ಯರ ಸಹಕಾರ ಹಾಗೂ ಸಿಬ್ಬಂದಿಗಳ ಕಠಿಣ ಪರಿಶ್ರಮದಿಂದ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ (ಬಹುರಾಜ್ಯ) ಯು ಅತ್ಯುತ್ತಮ ಆರ್ಥಿಕ ಚಟುವಟಿಕೆ ಹೊಂದಿದ್ದು, ದೀಪಾವಳಿ ಹಾಗೂ ದಸರಾ ನಿಮಿತ್ಯ ಸದಸ್ಯರಿಗೆ ಶೇ.೧೨ ಲಾಭಾಂಶ ಹಾಗೂ ಸಿಬ್ಬಂಧಿಗೆ ಶೇ.೧೦ ರಷ್ಟು ಬೊನಸ್ ನೀಡಲಾಗುವುದು ಎಂದು ಸೊಸೈಟಿಯ ಅಧ್ಯಕ್ಷ ಜಯಾನಂದ ಜಾಧವ ಹೇಳಿದರು.
ಅವರು ಮಂಗಳವಾರ ಚಿಕ್ಕೋಡಿ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಯಕ್ಸಂಬಾ ಪಟ್ಟಣದ ಬೀರೇಶ್ವರ ಅಂತರಾಜ್ಯ ಸಹಕಾರಿ ಸಂಸ್ಥೆಯ ಮುಖ್ಯ ಕಚೇರಿಯ ಸಭಾಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕೋಡಿ ಸಂಸದ ಹಾಗೂ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಅವರ ನೇತೃತ್ವ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಹಕಾರಿಯ ಲಾಭಾಂಶವನ್ನು ಸದಸ್ಯರ ಖಾತೆಗಳಿಗೆ ಜಮೆ ಮಾಡಲಾಗಿದ್ದು ಸದಸ್ಯರು ತಾವಿರುವ ಶಾಖೆಗಳಲ್ಲಿ ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸಿ ಲಾಭಾಂಶ ಪಡೆದುಕೊಳ್ಳಬಹುದು.
ಸಹಕಾರಿಯು ೧೫೬ ಶಾಖೆಗಳಲ್ಲಿ ೩.೬೧ ಲಕ್ಷ ಸದಸ್ಯರಿದ್ದು, ೩೨.೧೬ ಕೋಟಿ ಶೇರು ಬಂಡವಾಳದೊಂದಿಗೆ ೩೪೦೮ ಕೋಟಿ ಠೇವು ಹೊಂದಿ ೨೬೨೫ ಕೋಟಿ ಸಾಲ ವಿತರಿಸಿ ೩೭೦೦ ಕೋಟಿ ರೂಗಳ ದುಡಿಯುವ ಬಂಡವಾಳದೊಂದಿಗೆ ಅಗ್ರಮಾನ್ಯ ಸಹಕಾರಿಯಾಗಿ ರಾಜ್ಯ ಹಾಗೂ ಅಂತಾರಾಜ್ಯದಲ್ಲಿ ತನ್ನದೇ ಛಾಪು ಮೂಡಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ 35 ಕೋಟಿ ಲಾಭಗಳಿಸಿದೆ ಎಂದರು.
ಉಪಾಧ್ಯಕ್ಷ ಸಿದ್ರಾಮ ಗಡದೆ, ಅಪ್ಪಾಸಾಹೇಬ ಜೊಲ್ಲೆ,ಕಲ್ಲಪ್ಪ ಜಾಧವ, ಯಾಶಿನ್ ತಾಂಬೋಳೆ,ಬೀಪಿನ್ ದೇಶಪಾಂಡೆ,ಬಸಪ್ಪ ಗುರವ. ಪ್ರಧಾನ ವ್ಯವಸ್ಥಾಪಕ ರವೀಂದ್ರ ಚೌಗಲೆ, ಮಹಾದೇವ ಮಂಗಾವತೆ,ರಮೇಶ ಕುಂಭಾರ, ಎಸ್.ಕೆ.ಮಾನೆ, ಬಹದ್ದೂರ ಗುರವ,ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಕಲ್ಲಪ್ಪಾ ಹುನ್ನರಗಿ,ಶೇಖರ ಪಾಟೀಲ, ಪಾಂಡುರಂಗ ಪಾಟೀಲ,ರಾಘವೇಂದ್ರ ಗಿಡ್ಡ ಉಪಸ್ಥಿತರಿದ್ದರು.
ಸಿದ್ರಾಮ ಗಡದೆ, ಅಪ್ಪಾಸಾಹೇಬ ಜೊಲ್ಲೆ, ಕಲ್ಲಪ್ಪ ಜಾಧವ, ಯಾಶಿನ್ ತಾಂಬೋಳೆ,ಬೀಪಿನ್ ದೇಶಪಾಂಡೆ,ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ