Belagavi NewsBelgaum NewsKannada NewsKarnataka NewsLatest

*ಸಾರಿಗೆ ಸೌಲಭ್ಯ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ಸಾರ್ವಜನಿಕ ಪ್ರಯಾಣಿಕರು ಹಾಗೂ ಶಾಲಾ/ಕಾಲೇಜು ವಿಧ್ಯಾರ್ಥಿಗಳಿಂದ ಅಧಿಕ ಪ್ರಮಾಣದಲ್ಲಿ ಸಾರಿಗೆ ಸೌಲಭ್ಯದ ಬೇಡಿಕೆಗಳು ಬರುತ್ತಿರುವುದರಿಂದ ಪ್ರಸ್ತುತ ವಿಭಾಗದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸಾರಿಗೆ ಸೌಲಭ್ಯ ಒದಗಿಸಲಾಗಿದೆ.


ಪ್ರಸ್ತುತ ವಿಭಾಗದಿಂದ ಅಂತರಾಜ್ಯ/ದೂರಮಾರ್ಗಗಳಾದ ಠಾಣಾ, ಪೂಣಾ, ಬೊರಿವಲ್ಲಿ, ಔರಂಗಾಬಾದ್, ಲಾತೂರ, ರತ್ನಾಗಿರಿ, ವಿಶಾಲಗಡ, ಜ್ಯೋತಿಬಾ, ಪಂಡರಪೂರ, ಸಾಂಗಲಿ, ಆಜರಾ, ಚಂದಗಡ, ವೆಂಗುರ್ಲಾ, ಪಣಜಿ, ಹೈದ್ರಾಬಾದ ಮತ್ತು ವಿಜಯಪೂರ ಮಾರ್ಗದ ಒಟ್ಟು ೨೮ ಸಾರಿಗೆಗಳನ್ನು ರದ್ದುಪಡಿಸಿ ವಿಭಾಗದ ವ್ಯಾಪ್ತಿಗೆ ಒಳಪಡುವ ಶಾಲಾ ಕಾಲೇಜು ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.


ಅಂತರಾಜ್ಯ/ವೇಗದೂತ ಮಾರ್ಗದ ರದ್ದುಪಡಿಸಿದ ೭೧ ಸುತ್ತುಗಳು ಹಾಗೂ ಹೆಚ್ಚುವರಿಯಾಗಿ ಕಲ್ಪಿಸಲಾದ ಸಾರಿಗೆ ಸುತ್ತುಗಳ ಸಂಖ್ಯೆ ೨೦೭, ವಿಧ್ಯಾರ್ಥಿಗಳ ಬೇಡಿಕೆ ಅನುಸಾರವಾಗಿ ಪರಿಷ್ಕರಿಸಿ ನೀಡಲಾದ ಒಟ್ಟು ೨೯೦ ಅನುಸೂಚಿಗಳು. ಅಲ್ಲದೇ ವಿಧ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುವ ಮಾರ್ಗಗಳನ್ನು ಸ್ಟುಡೆಂಟ್ ಕಾರಿಡಾರ್‌ಗಳೆಂದು ಗುರುತಿಸಿ ಸದರಿ ಸ್ಥಳಗಳಲ್ಲಿ ಹೆಚ್ಚುವರಿ ಸಾರಿಗೆ ಸುತ್ತುಗಳನ್ನು ಅಳವಡಿಸಿ ಹೆಚ್ಚುವರಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ವಾಕರಸಾಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button