Kannada NewsLatest

ಬೆಳಗಾವಿ ಉಪಚುನಾವಣೆ: ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಕಲ ಸಿದ್ಧತೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯ ಮತದಾನ ಏ. 17 ರಂದು ನಡೆಯಲಿದ್ದು, ಬೆಳಗಾವಿಯ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಬೆಳಗಾವಿ ಲೋಕಸಭಾ ಉಪಚುನಾವಣೆ-2021 ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಳಗಾವಿ ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತಗಟ್ಟೆ, ಮತದಾರರು, ಮತದಾನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಮತದಾನ ಯಂತ್ರ, ಪೋಲಿಸ್ ಸಿಬ್ಬಂದಿ, ಪೋಲಿಸ್ ವಾಹನಗಳ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಉತ್ತರ ಬೆಳಗಾವಿಯ ವಿಧಾನಸಭಾ ಮತಕ್ಷೇತ್ರ:

ಉಪಚುನಾವಣೆ ಹಿನ್ನಲೆಯಲ್ಲಿ ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರಗಳಿಗೆ ಒಟ್ಟು340 ಮತಗಟ್ಟೆ, 242618 ಮತದಾರರು, ಮತದಾನ ಕೇಂದ್ರದಲ್ಲಿ ಕಾರ್ಯನಿರ್ವಾಹಿಸಲು ನೇಮಕಾತಿ ಮಾಡಿದ ಸಿಬ್ಬಂದಿ 1680, ಮತದಾನ ಯಂತ್ರಗಳು 340, ಒಟ್ಟು ನಿಯೋಜಿಸಿದ ಪೋಲಿಸ್ ಸಿಬ್ಬಂದಿ‌ 859, ಪೋಲಿಸ್ ವಾಹನಗಳು 25, 1000 ಕ್ಕೂ ಹೆಚ್ಚು ಮತದಾರರು ಇರುವ ಮತದಾರರ ಕೇಂದ್ರಗಳಿಗೆ ಹೆಚ್ಚುವರಿ 91 ಮತದಾನ ಕೇಂದ್ರ.

ಬೆಳಗಾವಿ ದಕ್ಷಿಣ ವಿ‌ಧಾನಸಭಾ ಮತಕ್ಷೇತ್ರ:

ಉಪಚುನಾವಣೆ ಹಿನ್ನಲೆಯಲ್ಲಿ ವಿಧಾನಸಭಾ ಮತಕ್ಷೇತ್ರದ ಬೆಳಗಾವಿ ದಕ್ಷಿಣದಲ್ಲಿ ಒಟ್ಟು 336 ಮತಗಟ್ಟೆ, 243027 ಮತದಾರರು, ಮತದಾನ ಕೇಂದ್ರದಲ್ಲಿ ಕಾರ್ಯನಿರ್ವಾಹಿಸಲು ನೇಮಕಾತಿ ಮಾಡಿದ ಸಿಬ್ಬಂದಿ 1700, ಮತದಾನ ಯಂತ್ರಗಳು 336, ಒಟ್ಟು ನಿಯೋಜಿಸಿದ ಪೋಲಿಸ್ ಸಿಬ್ಬಂದಿ‌ 790, ಪೋಲಿಸ್ ವಾಹನಗಳು 25, 1000 ಕ್ಕೂ ಹೆಚ್ಚು ಮತದಾರರು ಇರುವ ಮತದಾರರ ಕೇಂದ್ರಗಳಿಗೆ ಹೆಚ್ಚುವರಿ 85 ಮತದಾನ ಕೇಂದ್ರ.

ಇನ್ನುಳಿದಂತೆ ಪ್ರತಿ ಮತದಾನ ಕೇಂದ್ರಕ್ಕೆ ಕೋವಿಡ್ ನಿಯಮ ಪಾಲಿಸಲು ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಿ ಕೋವಿಡ್ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಲಾಗಿದೆ ಮತ್ತು ಕೋವಿಡ್ ಪ್ರಕರಣಗಳ ಅಂಗವಾಗಿ ಮತದಾರರಿಗೆ ಮತ ಚಲಾಯಿಸಲು ನಿಗದಿಪಡಿಸಿರುವ ಸಮಯ ಬೆಳಿಗ್ಗೆ 7 ರಿಂದ ಸಂಜೆ 7 ಎಂದು ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮಂಗಳಾ ಅಂಗಡಿ ಪರ ಬಾಲಚಂದ್ರ ಜಾರಕಿಹೊಳಿ ಮತಯಾಚನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button