
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಈ ವರ್ಷ ಅತಿವೃಷ್ಟಿಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಸೋಯಾಬಿನ್ ಮತ್ತು ಆಲೂಗಡ್ಡೆ ಬೆಳೆ ನಾಶವಾಗಿದ್ದು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.
ಅತಿವೃಷ್ಟಿಯಿಂದ ನಾಶವಾಗಿರುವ ಸೋಯಾಬಿನ್ ಗಿಡಗಳನ್ನು ಹೊತ್ತು ತಂದಿದ್ದ ರೈತರು, ಅವುಗಳನ್ನು ಪ್ರದರ್ಶಿಸಿ ಅಳಲು ತೋಡಿಕೊಂಡರು. ಕಳೆದ ವರ್ಷವೂ ಸಹ ಕ್ಯಾಬೀಜ್ ಮತ್ತಿತರ ತರಕಾರಿ ಬೆಳೆಗಳು ಹೊಲದಲ್ಲೇ ಕೊಳೆತು ಹೋಗಿದ್ದರೂ ಸರಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಒಂದೆಡೆ ಬೆಳೆ ನಾಶ ಇನ್ನೊಂದೆಡೆ ಪರಿಹಾರವೂ ಸಿಗದೆ ರೈತರು ಆತ್ನಹತ್ಯೆಯ ದಾರಿ ಹಿಡಿಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಬಳಿಕ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಪ್ಪಾ ಸಾಹೇಬ ಕಡೋಲಿ, ಮಾರುತಿ ಕಡೇಮನಿ, ರಾಜು ಕಾಗಣೆಕರ್ ಇತರರು ಇದ್ದರು.
ಬನವಾಸಿ ಪೊಲೀಸರ ಕಾರ್ಯಾಚರಣೆ: ಇಬ್ಬರು ಅಡಿಕೆ ಕಳುವು ಆರೋಪಿತರ ಬಂಧನ