ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ‘ಕಳೆದ ಕೋವಿಡ್-೧೯ ಅಲೆಗಳಲ್ಲಿ ಅಂಬ್ಯೂಲೇನ್ಸ್ ಮಹತ್ವವನ್ನು ಅರಿತುಕೊಂಡು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಂಬ್ಯೂಲೇನ್ಸ್ ಕಲ್ಪಿಸಿದ್ದೇನೆ. ನನ್ನ ಲೋಕಸಭಾ ಕ್ಷೇತ್ರದ ಎಲ್ಲಾ ಆರೊಗ್ಯ ಕೇಂದ್ರಗಳಿಗೆ ಅಂಬ್ಯೂಲೇನ್ಸ್ ಗಳನ್ನು ಶೀಘ್ರದಲ್ಲಿ ಮಂಜೂರು ಮಾಡಿಸಿ ಕೊಡಲಾಗುವುದು’ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಸ್ಥಳೀಯ ಸಮುದಾಯ ಆರೊಗ್ಯ ಕೇಂದ್ರಕ್ಕೆ ಸಂಸದರ ನಿಧಿಯಿಂದ ಮಂಜೂರಾದ ಅಂಬ್ಯೂಲೇನ್ಸ್ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕ್ಷೇತ್ರದ ಎಲ್ಲ ಸಮುದಾಯ ಕೇಂದ್ರಗಳಲ್ಲಿ ಸಂಸದರ ನಿಧಿಯಿಂದ ಮಂಜೂರಾತಿ ಪಡೆದು ಸಿ.ಸಿ. ಟಿವಿ ಕ್ಯಾಮರಾಗಳನ್ನು ಕೂಡ ಅಳವಡಿಸಲಾಗುವುದು’ ಎಂದರು.
ಪ್ರಾಸ್ತಾವಿಕವಾಗಿ ಎಸ್. ಎಸ್. ಗಡಾದ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ್ ಚಂದ್ರಕಾಂತ ಕೋಠಿವಾಲೆ, ಸ್ಥಳೀಯ ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜೆ, ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾರ್ಧಯಕ್ಷ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರಮನ್ ಸದ್ದಾಂ ನಗಾರಜಿ, ಸದಸ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು, ಸಿಎಮ್‌ಓ ಡಾ. ಸೀಮಾ ಗುಂಜಾಳ ವಂದಿಸಿದರು.
ಬೆಳಗಾವಿಯಲ್ಲಿ ಕೊರೊನಾ ಸ್ಫೋಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ