Karnataka News

*ಹೆತ್ತ ಶಿಶುವನ್ನು ರೈಲಿನ ಕಸದ ಡಬ್ಬಿಗೆ ಎಸೆದು ಹೋದ ತಾಯಿ*

ಪ್ರಗತಿವಾಹಿನಿ ಸುದ್ದಿ: ತಾಯಿಯೊಬ್ಬಳು ಹೆತ್ತ ಶಿಶುವನ್ನೇ ಎಕ್ಸ್ ಪ್ರೆಸ್ ರೈಲಿನ ಕಸದ ಡಬ್ಬಿಗೆ ಎಸೆದು ಹೋಗಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

Home add -Advt

ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲಿನ ಕಸದ ಡಬ್ಬಿಯಲ್ಲಿ ನವಜಾತ ಗಂಡು ಶಿಶುವೊಂದು ಪತ್ತೆಯಾಗಿದೆ.

ಭುವನೇಶ್ವರದಿಂದ ಬೆಂಗಳೂರಿಗೆ ಆಗಮಿಸಿದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ವಚ್ಛತೆ ಮಾಡುವ ವೇಳೆ ರೈಲಿನ ಡಸ್ಟ್ ಬಿನ್ ನಲ್ಲಿ ಶಿಶು ಪತ್ತೆಯಾಗಿದೆ. ಬಟ್ಟೆಯಲ್ಲಿ ಮಗುವನ್ನು ಸುತ್ತಿ ದುರುಳರು ಕಸದ ಡಬ್ಬಿಗೆ ಹಾಕಿದ್ದಾರೆ.

ರೈಲಿನಲ್ಲಿಯೇ ಮಹಿಳೆ ಹೆರಿಗೆಯಾಗಿದ್ದು, ಬಳಿಕ ಮಗುವನ್ನು ಡಸ್ಟ್ ಬಿನ್ ಗೆ ಎಸೆದು ಹೋಗಿರುವ ಸಾದ್ಯತೆ ಇದೆ ಎಂದು ಶಂಕಿಸಲಾಗಿದೆ. ಸ್ನವಜಾತ ಶಿಶು ಸಾವನ್ನಪ್ಪಿದ್ದು, ರೈಲ್ವೆ ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Back to top button