Kannada NewsLatest

ಹಾಲತ್ರಿ ಹಳ್ಳಕ್ಕೆ ಪಿಕ್ ನಿಕ್ ಗೆ ಹೋಗಿದ್ದ ಯುವಕರು ಶವವಾಗಿ ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮೂರು ದಿನಗಳ ಹಿಂದೆ ಪಿಕ್ ನಿಕ್ ಗೆಂದು ಹಾಲತ್ರಿ ಹಳ್ಳಕ್ಕೆ ಹೋಗಿದ್ದ ಇಬ್ಬರು ಯುವಕರು ಶವವಾಗಿ ಪತ್ತೆಯಾಗಿದ್ದು, ಶವವನ್ನು ಹೊರತೆಗೆಯಲಾಗಿದೆ.

ಮೃತರನ್ನು ಖಾನಾಪುರದ 16 ವರ್ಷದ ಉಮರ ಖಲಿಫಾ ಹಾಗೂ ಅರಘಾತ ಅರಕಾಟಿ ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ಪಿಕ್ ನಿಕ್ ಗೆಂದು ಮೂವರು ಯುವಕರು ಖಾನಾಪುರದ ಅಸೋಗಾ ಬಳಿಯ ಮಲಪ್ರಭಾ ನದಿಯ ಉಗಮ ಸ್ಥಾನ ಹಾಲತ್ರಿ ಹಳ್ಳಕ್ಕೆ ಹೋಗಿದ್ದರು. ಓರ್ವ ಯುವಕ ಬೈಕ್ ನಲ್ಲಿ ಪೆಟ್ರೋಲ್ ಮುಗಿದಿದೆ ಎಂದು ವಾಪಸ್ ಆಗಿದ್ದ.

ಮೂರು ದಿನಗಳಿಂದ ಇಬ್ಬರು ಯುವಕರು ನಾಪತ್ತೆಯಾಗಿದ್ದರಿಂದ ಪೊಲೀಸರು ಶೋಧ ನಡೆಸಿದ್ದರು. ಮೊಬೈಲ್ ನೆಟ್ ವರ್ಗ್ ಆಧರಿಸಿ ಶೋಧ ನಡೆಸಿದಾಗ ನಿನ್ನೆ ಇಬ್ಬರು ಯುವಕರ ಬಟ್ಟೆ, ಮೊಬೈಲ್ ಗಳು ಹಾಲತ್ರಿ ಹಳ್ಳದ ಬಳಿ ಪತ್ತೆಯಾಗಿತ್ತು. ಇದೀಗ ಬಾಲಕರ ಶವ ಹಳ್ಳದಲ್ಲಿ ಪತ್ತೆಯಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button