
ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಸ್ಥಳೀಯ ಲಯನ್ಸ್ ಕ್ಲಬ್ ನ 49ನೇ ವಾರ್ಷಿಕೋತ್ಸವ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಿಂದಿನ ಜಿಲ್ಲಾ ಗವರ್ನರ್ ಲಯನ್ ಮೋನಿಕಾ ಸಾವಂತ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಕ್ಲಬ್ ನ ನೂತನ ಅಧ್ಯಕ್ಷರಾಗಿ ನಿವೃತ್ತ ಅರಣ್ಯಾಧಿಕಾರಿ ಲಯನ್ ಮಲ್ಲೇಶಪ್ಪ ಬೆನಕಟ್ಟಿ, ಕಾರ್ಯದರ್ಶಿಯಾಗಿ ಲಯನ್ ರವಿಸಾಗರ ಉಪ್ಪೀನ ಹಾಗೂ ಖಜಾಂಚಿಯಾಗಿ ಲಯನ್ ಭಾವುರಾವ್ ಚವಾಣ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಯಾಗಿ ಮೋನಿಕಾ ಸಾವಂತ ಕಾರ್ಯನಿರ್ವಹಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳಗಾವಿ ಡಿ.ಸಿ.ಎಫ್ ಜಿ.ಪಿ ಹರ್ಷಭಾನು ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು. ಡಾ.ರಾಧಾಕೃಷ್ಣ ಹಾರವಾಡಕರ ಕಾರ್ಯಕ್ರಮ
ನಿರ್ವಹಿಸಿದರು.
ಪ್ರೊ.ಬಿ.ಎಂ ಹಮ್ಮಣ್ಣವರ ಸ್ವಾಗತಿಸಿದರು. ಸುರೇಶ ದೇಸಾಯಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಾವಿಯೋ ಪರೇರಾ, ಮಹಾಂತೇಶ ರಾಹುತ, ಬ್ರಹ್ಮಾನಂದ ಕೊಚೇರಿ, ಎಂ.ಜಿ ಕುಮಾರ ಮತ್ತಿತರರು ಉಪಸ್ಥಿತರಿದ್ದರು.
ನೆರೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಶೀಘ್ರ ಪರಿಹಾರ ಸಚಿವೆ ಶಶಿಕಲಾ ಜೊಲ್ಲೆ