Kannada NewsLatest

ಕೋವಿಡ್ 19 ಲಸಿಕಾ ನೊಂದಣಿ ಅಭಿಯಾನಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಭಾರತದಲ್ಲಿ ಉತ್ಪಾದನೆಗೊಂಡ ಎರಡೂ ವ್ಯಾಕ್ಸಿನ್ ಗಳು ಕೋವಿಡ್ ವೈರಸ್ ನ ತೀವೃತೆಯನ್ನು ತಡೆಯುವಲ್ಲಿ ಯಶಸ್ವಿಯಾಗಿವೆ ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಹೇಳಿದರು.

ಅವರು ಚಿಕ್ಕೋಡಿ ಜಿಲ್ಲಾ ಸಾಮಾಜಿಕ‌‌ ಜಾಲತಾಣ ವಿಭಾಗದಿಂದ ಚಿಕ್ಕೋಡಿ ತಾಲೂಕಾ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್ 19 ಲಸಿಕಾ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದರು. ವಿಶ್ವದ ಅನೇಕ ಮುಂದು ವರೆದ ರಾಷ್ಡ್ರಗಳಲ್ಲಿ ಕೋವಿಡ್ ನಿಯಂತ್ರಣ ಲಸಿಕೆಗಳು ಉತ್ಪಾದನೆಯಾಗಿದ್ದರೂ ಕೂಡ ನೀರಿಕ್ಷಿತ ಮಟ್ಟದಲ್ಲಿ‌ ಯಶಸ್ಸು ಕಾಣಲಿಲ್ಲ ಹೀಗಾಗಿ ಭಾರತದ ಎರಡೂ ವ್ಯಾಕ್ಸಿನ್ ಗಳಿಗೆ ವಿಶ್ವದ ಬಹುತೇಕ ರಾಷ್ಟ್ರಗಳು ಬೇಡಿಕೆ ಇಡುತ್ತಿದ್ದು, ಈ ಎರಡೂ ವ್ಯಾಕ್ಸಿನ್ ಗಳು ಸಂಪೂರ್ಣ ಸುರಕ್ಷಿತವಾಗಿವೆ ಎಲ್ಲರೂ ಸರಕಾರದ ನಿಯಮಾನುಸಾರ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ ಅವರು ಈ ಎರಡೂ‌ ವ್ಯಾಕ್ದಿನ್ ಗಳ ತಯಾರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸತತ ಪ್ರಯತ್ನ ವಿಶ್ವವೇ ಮೆಚ್ಚಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೊಳ, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂಭವಿ ಅಶ್ವಥಪುರ, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಸಂಚಾಲಕ ಪ್ರಸಾದ ಪಚಂಡಿ, ಮಂಡಲ‌ ಅಧ್ಯಕ್ಷ ಸಂಜೀವ ಪಾಟೀಲ, ಗ್ರಾಮೀಣ ಪ್ರಕೋಷ್ಠ ಸಂಚಾಲಕ‌ ರಾಮಗೌಡ ಪಾಟೀಲ ಹಾಗೂ ಮಂಡಲ‌ ಪದಾಧಿಕಾರಿಗಳು ಉಪಸ್ಥಿತರಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button