
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್-ಐಆರ್ ಎಫ್ ಸಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಉದ್ಯೋಗಕ್ಕೆ ಹುಡುಕುತ್ತಿದ್ದವರಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಐಆರ್ ಎಫ್ ಸಿ ನೇಮಕಾತಿ-2022-23ರ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಡೆಪ್ಯುಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಆಹ್ವಾನಿಸಲಾಗಿದೆ.
ಐಆರ್ ಎಫ್ ಸಿ ಉಪ ವ್ಯವಸ್ಥಾಪಕ, ಸಹಾಯಕ ಹುದ್ದೆ, ಕಾರ್ಯನಿರ್ವಹಕ ನಿರ್ದೇಶಕ (ಹಣಕಾಸು) ಹುದ್ದೆ ಗಳಿಗೆ ವಿದ್ಯಾರ್ಹತೆ ಸಿಎ, ಸಿಎಂ ಎ, ಪದವಿ, ಎಂಬಿಎ, ವ್ಯವಹಾರ ಆಡಳಿತ/ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಆಗಿರಬೇಕು.
ಡೆಪ್ಯೂಟಿ ಮ್ಯಾನೇಜರ್: ಮಾನವ ಸಂಪನ್ಮೂಲ ನಿರ್ವಹಣೆ ಎಂಬಿಎ, ಹೆಚ್ ಆರ್/ಪರ್ಸನಲ್ ಮ್ಯಾನೇಜ್ ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಸಹಾಯಕ ವ್ಯವಸ್ಥಾಪಕರು: ಸುಎ, ಸಿಎಂಎ,ಪದವಿ ಪಡೆದಿರಬೇಕು.
ಅರ್ಜಿ ಸಲ್ಲಿಸಲು ಜೂನ್ 20 ಕೊನೆ ದಿನ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. @irfc.nic.in
ಪ್ರಾಂಶುಪಾಲೆಗೂ ಅವನೆ ಗಂಡ, ಮೇಲ್ವಿಚಾರಕಿಗೂ ಆತನೆ ಪತಿ, ಶಿಕ್ಷಕಿಗೂ ಅವನೇ ಯಜಮಾನ, ವಿದ್ಯಾರ್ಥಿಯನ್ನೂ ಬಿಡದ ವ್ಯಕ್ತಿ