Latest

ಹೊಸ ಪ್ರಕರಣ 204, ಆಸ್ಪತ್ರೆಯಿಂದ ಬಿಡುಗಡೆಗೊಂಡವರು 348

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬುಧವಾರ ರಾಜ್ಯದಲ್ಲಿ 204 ಜನರಿಗೆ ಕೊರೋನಾ ದೃಢಪಟ್ಟಿದೆ. ಇದೇ ವೇಳೆ, ಬುಧವಾರ 348 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ ಒಟ್ಟೂ 7734 ಜನರಿಗೆ ಸೋಂಕು ತಗುಲಿದ್ದರೆ, ಸಕ್ರೀಯ ಪ್ರಕರಣಗಳು 2824. ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡವರು 4804.

ಕೊರೋನಾದಿಂದ ರಾಜ್ಯದಲ್ಲಿ ಬುಧವಾರ ಮೃತಪಟ್ಟವರು 8, ಈವರೆಗೆ ಮೃತಪಟ್ಟವರು 102. 72 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರದ 204 ಪ್ರಕರಣಗಳಲ್ಲಿ 106 ಜನರು ಅಂತಾರಾಜ್ಯ ಪ್ರಯಾಣಿಕರು, ಇಬ್ಬರು ಅಂತಾರಾಷ್ಟ್ರೀಯ ಪ್ರಯಾಣಿಕರು.

Home add -Advt

ಬುಧವಾರ ಬೆಂಗಳೂರಿನಲ್ಲಿ 55, ಯಾದಗಿರಿಯಲ್ಲಿ 37, ಬಳ್ಳಾರಿ 29, ಕಲಬುರಗಿ 19, ದಕ್ಷಿಣ ಕನ್ನಡ 8, ಧಾರವಾಡ 8, ಮಂಡ್ಯ 7, ಹಾಸನ 5, ಉಡುಪಿ, ಬಾಗಲಕೋಟೆ, ಶಿವಮೊಗ್ಗ ತಲಾ 4, ದಾವಣಗೆರೆ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ತಲಾ 3, ರಾಯಚೂರು, ಮೈಸೂರು, ಬೆಂಗಳೂರು ಗ್ರಾಮಾಂತರ ತಲಾ 1 ಪ್ರಕರಣ.

 

Related Articles

Back to top button