Belagavi NewsBelgaum NewsKannada NewsKarnataka NewsLatestUncategorized

*ಘಟಪ್ರಭಾ ನದಿಯಲ್ಲಿ ಕೊಚ್ಚಿ ಹೋದ ಪ್ರಕರಣ; ಬೈಕ್ ಸವಾರರಿಬ್ಬರ ಮೃತದೇಹ ಪತ್ತೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಆಯತಪ್ಪಿ ಬೈಕ್ ಮೇಲಿಂದ ಬಿದ್ದು ಇಬ್ಬರು ಸವಾರರು ಘಟಪ್ರಭಾ ನದಿಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೃತದೇಹ ಪತ್ತೆಯಾಗಿದೆ.

ಸೋಮವಾರ ಬೈಕ್ ನಲ್ಲಿ ತೆರಳುತ್ತಿದ್ದಾಗ ನಿಯಂತ್ರ ತಪ್ಪಿ ಬೈಕ್ ಸಮೇತ ಘಟಪ್ರಭಾ ನದಿಗೆ ಬಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇದೀಗ ಇಬ್ಬರ ಮೃತದೇಹ ಹೊರ ತಗೆಯುವಲ್ಲಿ ಎಸ್ ಡಿ ಆರ್ ಎಫ್ ತಂಡ ಯಶಸ್ವಿಯಾಗಿದೆ.

Home add -Advt

ಚನ್ನಪ್ಪ ಹರಿಜನ(38) ದುರ್ಗಾಣಿ ಹರಿಜನ(35) ಮೃತ ದುರ್ದೈವಿಗಳು. ಕೆಲಸದ ನಿಮಿತ್ಯ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಿಂದ ಮಹಾಲಿಂಗಪುರಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿತ್ತು.

ನಿರಂತರ ಕಾರ್ಯಾಚರಣೆ ನಡೆಸಿ ನಿನ್ನೆ ಚನ್ನಪ್ಪ ಹರಿಜನ ಮೃತದೇಹ ಹೊರತೆಗೆದಿದ್ದ ಎಸ್ ಡಿ ಆರ್ ಎಫ್ ತಂಡ, ಇಂದು ಮುಂಜಾನೆಯೇ ನದಿಗಿಳಿದು ಕಾರ್ಯಚರಣೆ ನಡೆಸಿ ದುರ್ಗಾವ್ವ ಹರಿಜನ ಮೃತದೇಹವನ್ನು ಹೊರ ತೆಗೆದಿದ್ದಾರೆ.

ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button