*ಬೆಳಗಾವಿಯಲ್ಲಿ ಹಾಡಹಗಲೇ ಗೋವಾ ಮಾಜಿ ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ: ಮೆಟ್ಟಿಲೇರುವಾಗಲೇ ಕುಸಿದು ಬಿದ್ದು ಸಾವು*
![](https://pragativahini.com/wp-content/uploads/2025/02/lavoo-mamaledar.jpg)
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಆಟೋ ಚಾಲಕನೊಬ್ಬ ಗೋವಾದ ಆಜಿ ಶಾಸಕ ಲಾವೋ ಮಾಮಲೇದಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಲಾಡ್ಜ್ ನಲ್ಲಿ ಮೆಟ್ಟಿಲು ಹತ್ತುತ್ತಿದ್ದವರು ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
![](https://pragativahini.com/wp-content/uploads/2025/02/1002972574-1024x569.jpg)
ಗೋವಾದ ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೋ ಮಾಮಲೇದಾರ್ (69) ಮೃತ ದುರ್ದೈವಿ. ಬೆಳಿಗ್ಗೆ ಖಡೇಬಜಾರ್ ಬಳಿ ತೆರಳುತ್ತಿದ್ದ ವೇಳೆ ಲಾವೋ ಮಾಮಲೇದಾರ್ ಅವರ ಕಾರು ಆಟೋಗೆ ಟಚ್ ಆಗಿತ್ತು. ಬಳಿಕ ವರು ಬೆಳಗಾವಿ ನಗರದ ಶ್ರೀನಿವಾಸ್ ಲಾಡ್ಜ್ ಗೆ ಬಂದಿದ್ದರು. ಲಾಡ್ಜ್ ಬಳಿ ಬಂದ ಆಟೋ ಚಾಲಕ ಲಾವೋ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಕಪಾಳಮೋಕ್ಷ ಮಾಡಿದ್ದಾನೆ ಎನ್ನಲಾಗಿದೆ.
![](https://pragativahini.com/wp-content/uploads/2025/02/1002973213-903x1024.jpg)
ಬಳಿಕ ಅವರು ಲಾಡ್ಜ್ ಮೆಟ್ಟಿಲು ಹತ್ತುವ ವೇಳೆ ಏಕಾಏಕಿ ಕುಸಿದು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದು ಕೊಲೆಯೋ ಅಥವಾ ಹೃದಯಾಘಾತದಿಂದ ಸಾವೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾವೋ ಮಾಮಲೇದಾರ್ ಮೃತದೇಹವನ್ನು ಬಿಮ್ಸ್ ಆಸ್ಪತ್ರೆಗೆ ತರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ