Kannada NewsLatest

ಮೂಡಲಗಿಯಲ್ಲಿ ನೂತನ ಕಚೇರಿ ಆರಂಭಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ಮೂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರಿಗೆ ಅನುಕೂಲವಾಗಲು ಪಟ್ಟಣದ ತಹಶೀಲ್ದಾರ ಕಚೇರಿ ಬಳಿ ತಮ್ಮ ಶಾಸಕರ ಕಚೇರಿ ಆರಂಭಿಸಲಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಹಾಗೂ ಕೆ ಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಪಟ್ಟಣದ ಬಸವನಗರದಲ್ಲಿ ನೂತನವಾಗಿ ಆರಂಭಿಸಲಾದ ಅರಭಾವಿ ಶಾಸಕರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಡಲಗಿ ಹೊಸ ತಾಲೂಕು ರಚನೆ ಬಳಿಕ ಸಾರ್ವಜನಿಕರ ಹಿತದೃಷ್ಟಿಯಿಂದ ತಮ್ಮ ಕಚೇರಿ ಆರಂಭಿಸಲಾಗಿದೆ ಎಂದರು.

ವೈಯಕ್ತಿಕ ಕುಂದು ಕೊರತೆಗಳು, ಸರ್ಕಾರಿ ಸೌಲಭ್ಯಗಳು, ಅಭಿವೃದ್ಧಿಪರ ಕೆಲಸಗಳು ಹಾಗೂ ಸಲಹೆ ಸೂಚನೆಗಳನ್ನು ನೀಡಲು ಈ ಕಚೇರಿಯನ್ನು ತೆರೆದಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ. ಗೋಕಾಕ್ ನ ಎನ್ ಎಸ್ ಎಫ್ ಅತಿಥಿ ಗೃಹದ ಮಾದರಿಯಂತೆ ಮೂಡಲಗಿಯಲ್ಲಿಯೂ ಸಹ ಕೆಲಸ ನಿರ್ವಹಿಸಲು ಸಿಬ್ಬಂದಿಗೆ ಸೂಚಿಸಲಾಗಿದ್ದು, ಸಾರ್ವಜನಿಕರು ತಮ್ಮ ದೂರು, ದು:ಖ, ದುಮ್ಮಾನಗಳನ್ನು ಹೇಳಿಕೊಳ್ಳಲು ಈ ಕಚೇರಿಯು ಅವಶ್ಯವಾಗಿಯೂ ಸ್ಪಂದನೆ ನೀಡಲಿದೆ ಎಂದು ಹೇಳಿದರು.

ಮೂಡಲಗಿ ಪಟ್ಟಣದ ಅಭಿವೃದ್ಧಿ ಜೊತೆಗೆ ಅರಭಾವಿ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸಲಾಗುತ್ತಿದ್ದು, ಮೂಡಲಗಿ ಪುರಸಭೆಯ ಅಭಿವೃದ್ಧಿಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತಹಶೀಲ್ದಾರ್ ಕಚೇರಿಯಿಂದ ಮುಖ್ಯ ರಸ್ತೆ ಮತ್ತು ಕಾಲೇಜು ರಸ್ತೆಯಿಂದ ಮೂಡಲಗಿ ಕ್ರಾಸ್ ವರೆಗೆ ಸುಮಾರು 4 ಕೀ.ಮೀ ವರೆಗಿನ ರಸ್ತೆ ಕಾಮಗಾರಿಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ, ಮುಖಂಡರಾದ ರವಿ ಸೋನವಾಲಕರ, ಪುರಸಭೆ ಮಾಜಿ ಅಧ್ಯಕ್ಷರಾದ ರಾಮಣ್ಣಾ ಹಂದಿಗುಂದ, ರವಿ ಸಣ್ಣಕ್ಕಿ, ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯ ಸೋನವಾಲಕರ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲು ಪಾಟೀಲ, ಸಂತೋಷ ಸೋನವಾಲಕರ, ಭೂ ನ್ಯಾಯ ಮಂಡಳಿ ಸದಸ್ಯ ಭೀಮತಿ ಮಗದುಮ್ಮ, ಟಿಎಪಿಸಿಎಂಎಸ್ ನಿರ್ದೇಶಕ ವೆಂಕನಗೌಡ ಪಾಟೀಲ, ರಮೇಶ ಸಣ್ಣಕ್ಕಿ, ಹುಸೇನಸಾಬ ಶೇಖ, ಸಿದ್ದು ಕೊಟಗಿ, ಪ್ರಶಾಂತ ನಿಡಗುಂದಿ, ಅನ್ವರ ನದಾಫ, ಮರೆಪ್ಪ ಮರೆಪ್ಪಗೊಳ, ರಾಮು ಝಂಡೇಕುರುಬರ, ದಶರಥ ಗಾಡಿವಡ್ಡರ, ಸಂತೋಷ ಪಾರ್ಶಿ, ತಹಶಿಲ್ದಾರ ಡಿ.ಜೆ.ಮಹಾತ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಸಿಪಿಐ ವೆಂಕಟೇಶ ಮುರನಾಳ, ಸಿಡಿಪಿಓ ವಾಯ್.ಎಂ.ಗುಜನಟ್ಟಿ, ಬಿಇಓ ಅಜೀತ ಮುನ್ನಿಕೇರಿ, ಪಿಎಸ್ ಐ ಹೆಚ್.ವಾಯ್.ಬಾಲದಂಡಿ, ಕಸಾಪ ಅಧ್ಯಕ್ಷ ಸಿದ್ರಾಮ ದ್ಯಾಗನಟ್ಟಿ, ಸಾಹಿತಿ ಹಾಗೂ ಪತ್ರಕರ್ತ ಬಿ.ಪಿ.ಬಂದಿ, ಪ್ರೊ.ಸಂಗಮೇಶ ಗುಜಗೊಂಡ, ಅರಭಾವಿ ಕ್ಷೇತ್ರದ ವಿವಿಧ ಗ್ರಾಮಗಳ ಸಾರ್ವಜನಿಕರು, ಬಿಜೆಪಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button