*ಬಂಗಾರ, ಬೆಳ್ಳಿ ಹೊಸದರಂತೆ ಮಾಡಿಕೊಡುವುದಾಗಿ ಹೇಳಿ ಒಡವೆಗಳನ್ನು ಕದ್ದು ಕಲ್ಲು ಕೊಟ್ಟು ಎಸ್ಕೇಪ್ ಆದ ಕಳ್ಳ*
ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ಹಳೆಯ ತಾಮ್ರ, ಬೆಳ್ಳಿ, ಬಂಗಾರ ಆಭರಣ ಹೊಸದರಂತೆ ಮಾಡಿ ಕೊಡುತ್ತೇನೆ ಎಂದು ನಂಬಿಸಿ ಬಂಗಾರ ಬದಲು ಕಲ್ಲು ಕೊಟ್ಟು ಕಳ್ಳ ಪರಾರಿಯಾದ ಘಟನೆ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಜನತಾ ಪ್ಲಾಟ್ ನಲ್ಲಿ ನಡೆದಿದೆ.
ಜನತಾ ಪ್ಲಾಟ್ ನಿವಾಸಿ ಸರಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಲಕ್ಕಪ್ಪ ಪೂಜೇರಿ ಮನೆಗೆ ಬೈಕ್ ನಲ್ಲಿ ಬಂದ ವ್ಯಕ್ತಿಯೋರ್ವ ಹಳೆಯ ತಾಮ್ರ, ಬೆಳ್ಳಿ, ಬಂಗಾರ ಆಭರಣ ಹೊಸದರಂತೆ ಹೊಳೆಯುವಂತೆ ಮಾಡಿ ಕೊಡುತ್ತೇನೆ ಎಂದು ನಂಬಿಸಿದ್ದ. ಲಕ್ಕಪ್ಪ ಪೂಜೇರಿ ಪತ್ನಿ ಸವಿತಾ ಪೂಜೇರಿ ಮೊದಲಿಗೆ ತಾಮ್ರದ ಹಳೆಯ ಪಾತ್ರೆ ನೀಡಿ ತೋಳಿದು ತೋರಿಸುವಂತೆ ತಿಳಿಸಿದ್ದಾರೆ. ಅದರಂತೆ ತಾಮ್ರದ ಪಾತ್ರೆ ಹೊಳೆಯುವಂತೆ ಮಾಡಿ ಕೊಟ್ಟ ಕಳ್ಳ, ಮನೆಯವರನ್ನು ನಂಬಿಸಿ ಕೊರಳಲ್ಲಿದ್ದ 1 ತೊಲೆಯ ಮಂಗಳ ಸೂತ್ರ, 3 ತೊಲೆಯ ಅವಲಕ್ಕಿ ಸರ ಪಡೆದು ತಾನೇ ತಂದಿದ್ದ ಗ್ಲಾಸ್ ನಲ್ಲಿ ನೀರು, ಕೆಂಪು ಪೌಡರ್ ನಲ್ಲಿ ತೊಳೆದು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಕೊಟ್ಟಿದ್ದಾನೆ.
20 ನಿಮಿಷದ ನಂತರ ತೆಗೆದು ನೋಡುವಂತೆ ಹೇಳಿ ಎಸ್ಕೇಪ್ ಆಗಿದ್ದಾನೆ. 20 ನಿಮಿಷದ ಬಳಿಕ ಕವರ್ ತೆಗೆದು ನೋಡಿದ ಸವಿತಾ ಶಾಕ್ ಆಗಿದ್ದಾರೆ. ಪ್ಲಾಸ್ಟಿಕ್ ಕವರ್ ನಲ್ಲಿ ಕಲ್ಲು ಮತ್ತು ಕೆಂಪ್ಪು ಪೌಡರನಲ್ಲಿ ಕಲ್ಲು ಇಟ್ಟು ಮೋಸ ಮಾಡಿರುವುದು ಗೊತ್ತಾಗಿದೆ. ಬರೋಬ್ಬರಿ 2 ಲಕ್ಷ 40 ಸಾವಿರದ ಬಂಗಾರವನ್ನು ಕಳ್ಳ ಕದ್ದು ಪರಾರಿಯಾಗಿದ್ದಾನೆ. ಕುಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ