Kannada NewsLatest

ಗೂಡ್ಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಚಾಲಕ ಸಾವು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸ್ವಿಫ್ಟ್ ಡಿಜೈರ್ ಕಾರು ಮತ್ತು ಬೊಲೆರೂ ಗೂಡ್ಸ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಬ್ಬೂರ ಪಟ್ಟಣದ ನಿಪ್ಪಾಣಿ-ಮುದೋಳ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

Home add -Advt

ಮೃತಪಟ್ಟ ವ್ಯಕ್ತಿಯು ಮುದೋಳದ ಮುಬಾರಕ ಮಕಬುಲಸಾಬ ಗಲಗಲಿ(35) ಎಂದು ಗುರುತಿಸಲಾಗಿದೆ. ಮುದೋಳದಿಂದ-ಚಿಕ್ಕೋಡಿಯ ಕಡೆಗೆ ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದರು. ಎದುರಿ ನಿಂದ ಬರುತ್ತಿದ್ದ ಬೊಲೆರೂ ಗುಡ್ಸ್ ವಾಹನ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

ಕತ್ತೆಯೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ ಗೂಡ್ಸ್ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಕತ್ತೆಯ ಮೇಲೆ ಹಾದುಹೋಗಿದ್ದಲ್ಲದೇ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರು ಚಾಲಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ ಇನ್ನುಳಿದ ಮೂವರಿಗೆ ಗಂಭಿರ ಗಾಯವಾಗಿದ್ದು, ಗೋಕಾಕದ ಖಾಸಗಿ ಆಸ್ಪೆತ್ರೆಗೆ ದಾಖಲಿಸಲಾಗಿದೆ.

ಅಪಘಾತವಾಗುತ್ತಿದ್ದಂತೆ ಬೊಲೆರೂ ಗುಡ್ಸ್ ವಾಹನದ ಚಾಲಕ ಸ್ಥಳದಲ್ಲಿಯೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಕಬ್ಬೂರ ಉಪಠಾಣೆಯ ಎಎಸೈ ಎಸ್.ಸಿ. ಮಠಪತಿ ಮತ್ತು ಸತೀಶ ರೆಡ್ಡಿ ಪರಿಶೀಲನೆ ನಡೆಸಿದ್ದು, ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾಲು ಜಾರಿ ಹೊಂಡಕ್ಕೆ ಬಿದ್ದ ಬಾಲಕರು; ಇಬ್ಬರ ದುರ್ಮರಣ

Related Articles

Back to top button