
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಕ್ಷಣ ಕ್ಷಣಕ್ಕೂ ಘಟಪ್ರಭಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಅಡಬಟ್ಟಿ ಗ್ರಾಮದಲ್ಲಿ ದಂಪತಿ, ಮಗು ಪ್ರವಾಹದ ಮಧ್ಯೆ ಸಿಲುಕಿದ್ದು, ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ.
ಘಟಪ್ರಭಾ ನದಿ ಪ್ರವಾಹದಿಂದಾಗಿ ಅಡಬಟ್ಟಿ ಗ್ರಾಮ ಜಲಾವೃತಗೊಂಡಿದ್ದು, ರಾತ್ರೋ ರಾತ್ರಿ ಗ್ರಾಮದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಎತ್ತರದ ಮನೆಯೊಂದರಲ್ಲಿ ದಂಪತಿ ಹಾಗೂ ಮಗು ಮಾತ್ರ ಸಿಲುಕಿಕೊಂಡಿದ್ದು, ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ.
ಇನ್ನು ಗೋಕಾಕ್ ನಗರದಲ್ಲೂ ನದಿ ನೀರು ನುಗ್ಗಿದ್ದು, ಆಸ್ಪತ್ರೆಗಳು ಜಲಾವೃತಗೊಂಡಿವೆ. 19 ರೋಗಿಗಳನ್ನು ಬೇರೊಂದು ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿದೆ.
ಪ್ರವಾಹ ಪೀಡಿತ ಜನರ ಸಂಕಷ್ಟಕ್ಕೆ ಸ್ಪಂದನೆ: ಹೆಬ್ಬಾಳಕರ್, ಜಾರಕಿಹೊಳಿ ಪ್ರವಾಸ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ