Latest

ಆಟವಾಡುತ್ತಾ ಗಣೇಶನ ಮೂರ್ತಿಯನ್ನೇ ನುಂಗಿದ ಕಂದಮ್ಮ…ಮುಂದೇನಾಯ್ತು…?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಆಟವಾಡುತ್ತ ಪುಟ್ಟ ಗಣೇಶ ಮೂರ್ತಿಯನ್ನೇ ಮೂರು ವರ್ಷದ ಮಗು ನುಂಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಚಿಕ್ಕ ಮೆಟಲ್ ಗಣಪತಿ ವಿಗ್ರಹದೊಂದಿಗೆ ಆಟವಾಡುತ್ತಿದ್ದ ಮಗು ತಕ್ಷಣ ಬಾಯಿಗೆ ಹಾಕಿಕೊಂಡು ನುಂಗಿದೆ. ವಿಗ್ರಹ ಎದೆ ಭಾಗದಲ್ಲಿ ಸಿಲುಕಿಕೊಂಡಿದೆ. ಗಮನಕ್ಕೆ ಬರುತ್ತಿದ್ದಂತೆ ಕಂಗಾಲಾದ ಪೋಷಕರು ಮಗುವನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

Home add -Advt

ವೈದ್ಯರು ಮಗುವಿನ ಎಕ್ಸ್ ರೇ ಮಾಡಿ ನೋಡಿದಾಗ ಪುಟ್ಟ ವಿಗ್ರಹ ಅನ್ನನಾಳದ ಬಳಿ ಸಿಕ್ಕಿಕೊಂಡಿರುವುದು ಪತ್ತೆಯಾಗಿದೆ. ಮಗುವಿನ ಹೊಟ್ಟೆ ಭಾಗಕ್ಕೆ ವಿಗ್ರಹವನ್ನು ತಂದು ಮಗುವನ್ನು ಉಲ್ಟಾ ಮಾಡಿ ಎಂಡೋಸ್ಕೋಪಿಕ್ ಮೂಲಕ ಗಣೇಶನ ಮೂರ್ತಿಯನ್ನು ಹೊರ ತೆಗೆಯಲಾಗಿದೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದೆ.

Related Articles

Back to top button