Kannada NewsLatest

ಬೆಳಗಾವಿಯಲ್ಲಿ ಹೈಟೆಕ್ ಅನುಭವ ಮಂಟಪ ಸ್ಥಾಪನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಸಮಾನತೆಯ ಹರಿಕಾರ ಬಸವೇಶ್ವರರ ಜೀವನದ ಸಾಧನೆ ಸಾರುವ ಅನುಭವ ಮಂಟಪ ಬೆಳಗಾವಿಯಲ್ಲಿ ಇನ್ನೂ ಕೇಲವೇ ಕೆಲುವು ದಿನಗಳಲ್ಲಿ ಸ್ಥಾಪನೆ ಆಗಲಿದೆ.‌

ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರ ಪ್ರಯತ್ನದ ಫಲವಾಗಿ ಬೆಳಗಾವಿಯ ಮಾಹಾಂತೇಶ ನಗರದ ಅಕ್ಕಮಹಾದೇವಿ ಮಾರ್ಗದಲ್ಲಿ ಅನುಭವ ಮಂಟಪ ಸ್ಥಾಪನೆಗೆ ಈಗಾಗಲೇ ಕಟ್ಟಡ ಗುರುತಿಸಲಾಗಿದೆ. ಈ ಕಟ್ಟಡದಲ್ಲಿ ಸುಮಾರು 5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ ನೀಡಿ ಅನುಭವ ಮಂಟಪ ಸ್ಥಾಪನೆ ಆಗಲಿದ್ದು, ಇಂದು ಗದಗಿನ ತೋಂಟದಾರ್ಯ ಗುರುಸಿದ್ದ ಮಹಾಸ್ವಾಮಿಗಳು ಪರಿಶೀಲನೆ ನಡೆಸಿ, ಅನುಭವ ಮಂಟಪ ಸ್ಥಾಪನೆಗೆ ಶುಭ ಹಾರೈಸಿದರು. ‌

ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು, ಲಿಂಗ ಭೇದ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದವರು. ಮಹಿಳೆಯರು ಪುರುಷರು ಎನ್ನದೆ ಸಮಾನತೆಯ ಪಾಠ ಮಾಡಿದವರು.‌ ಹೀಗೆ ಸಮಾನತೆಯ ಹರಿಕಾರ ಬಸವಣ್ಣನವರ ಸಂಪೂರ್ಣ ಜೀವನ ಚರಿತ್ರೆಯನ್ನು ಅಥವಾ ಸಾಧನೆಯನ್ನು ನಾವು ಬೆಳಗಾವಿಯಲ್ಲೇ ವೀಕ್ಷಣೆ ಮಾಡಬಹುದು.

5 ಕೋಟಿ ವೆಚ್ಚದಲ್ಲಿ ಈ ಲೈಬ್ರರಿ ಹಾಗೂ ರೀಡಿಂಗ್ ಲೈಬ್ರರಿ, ಬಸವಣ್ಣನವರು 12 ನೇ ಶತಮಾನದಲ್ಲಿ ಸ್ಥಾಪಿಸಿದ ಪಾರ್ಲಿಮೆಂಟ್ ಮಾದರಿಯಲ್ಲಿ ಸಭಾ ಭವನ ಸ್ಥಾಪನೆ. ಬಸವಣ್ಣನವರ ವಚನಗಳನ್ನು ಐದಾರು ಭಾಷೆಗಳಲ್ಲಿ ಆಡಿಯೊ ಹಾಗೂ ವಿಡಿಯೋ ಮೂಲಕ ಪ್ರವಾಸಿಗರಿಗೆ ತಿಳಿಸುವ ವ್ಯವಸ್ಥೆ ಆಗಲಿದ್ದು, ಬೃಹತ್ ಮ್ಯೂಸಿಯಂ ನಿರ್ಮಾಣವಾಗಲಿದೆ.‌

ಕೀಳು ಮಟ್ಟದ ಹೇಳಿಕೆ: ರಾಜ್ಯದ ಹಲವೆಡೆ ಸಂಜಯ ಪಾಟೀಲ ವಿರುದ್ಧ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button