Kannada NewsLatest

*ಬೆಳಗಾವಿ: ಬಂಗಾರ ಅಂಗಡಿಯಲ್ಲಿ ಕಳ್ಳತನ; ಆರೋಪಿ ಬಂಧನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಳೆದ ವರ್ಷ ಡಿಸೆಂಬರ ತಿಂಗಳಲ್ಲಿ ಹುಕ್ಕೇರಿ ಪಟ್ಟಣದ ಜ್ಯುವೇಲರಿ ಅಂಗಡಿಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯಿಂದ 36.81.528/-ರೂ ಮೌಲ್ಯದ 643 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ವರ್ಷ ಹುಕ್ಕೇರಿ ಪಟ್ಟಣದ ಜ್ಯುವೇಲರಿ ಅಂಗಡಿಯಲ್ಲಿ 643 ಗ್ರಾಂ, ಬಂಗಾರದ ಆಭರಣಗಳು ಕಳ್ಳತನವಾಗಿತ್ತು. ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಗೋಕಾಕ ಉಪವಿಭಾಗದ ಡಿ.ಎಸ್.ಪಿ. ದೂದಪೀರ ಮುಲ್ಲಾ ಇವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ಕೈಗೊಂಡ ಹುಕ್ಕೇರಿ ಪೊಲೀಸ್ ಇನ್ಸಪೆಕ್ಟರ್ ಮತ್ತು ಅವರ ತಂಡದ ಸಿಬ್ಬಂದಿಗಳು ದಿನಾಂಕ: 02-01-2023 ರಂದು ಕಳ್ಳತನವಾದ ಜ್ಯುವೆಲರಿ ಅಂಗಡಿಯಲ್ಲಿ ಸೆಲ್ಸಮನ್ ಅಂತಾ ಕೆಲಸ ಮಾಡುವ ವ್ಯಕ್ತಿಯನ್ನು ಬಂಧಿಸಿ ಆತನಿಂದ ಅದೇ ದಿನ 121 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಬಂಧಿತ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು.

ನಿನ್ನೆ ದಿನಾಂಕ 23-02-2023 ರಂದು ಕಳ್ಳತನವಾಗಿದ್ದ ಉಳಿದ 522 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಕಾರ್ಯದಲ್ಲಿ ಹುಕ್ಕೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಎಮ್. ಎಮ್ ತಹಶೀಲ್ದಾರ, ಎ.ಎಸ್.ಸನದಿ ಎ.ಎಸ್.ಐ ಹಾಗೂ ಸಿಬ್ಬಂದಿ ಜನರಾದ ಸಿ. ಡಿ ಪಾಟೀಲ ಸಿ.ಎಚ.ಸಿ 1361. ಲಕ್ಷ್ಮಣ ಎಸ್. ಕೋಚರಿ ಸಿ.ಎಚ್.ಸಿ 2541 ಮಂಜುನಾಥ.ಎಸ್.ಕಟ್ಟೂರ ಸಿಪಿಸಿ 3042. ಗಜಾನನ.ಎಸ್, ಕಾಂಬಳೆ ಸಿಪಿಸಿ 3255, ಸದ್ದಾಂ. ಆರ್. ರಾಮದುರ್ಗ ಸಿಪಿಸಿ 1512, ಅಜೀತ, ಎಲ್ ನಾಯಕ ಸಿ.ಪಿ.ಸಿ 3277, ಕು. ಸಾವಿತ್ರಿ ಆರ್. ಅಂತರಗಟ್ಟಿ ಡಬ್ಲ್ಯು.ಪಿ.ಸಿ 3513 ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ, ಅರ್ಹ ನಗದು ಬಹುಮಾನವನ್ನು ಮಂಜೂರಿಸಲಾಗಿದೆ.

*ರಸ್ತೆಯಲ್ಲಿಯೇ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ; ಉತ್ತರ ಕನ್ನಡದಲ್ಲಿ ಭೀಕರ ಘಟನೆ*

https://pragati.taskdun.com/4-people-murderuttara-kannadabhatkalaone-family/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button