
ಪ್ರಗತಿವಾಹಿನಿ ಸುದ್ದಿ: ಮಗಳ ಜೊತೆ ಅಸಭ್ಯವಾಗಿ ವರ್ತಿಸಿ ಆಕೆಯ ಮೇಲೆ ಎಗರಿದ್ದ ಪಾಪಿ ಪತಿಯನ್ನು ಪತ್ನಿಯೇ ಬರ್ಬರವಗೈ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ.
ಶ್ರೀಮಂತ ಇಟ್ನಾಳ್ ಕೊಲೆಯಾಗಿರುವ ವ್ಯಕ್ತಿ. ಸಾವಿತ್ರಿ ಇಟ್ನಾಳ್ ಪತಿಹನ್ನೇ ಕೊಲೆಗೈದ ಪತ್ನಿ. ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ ಶ್ರೀಮಂತ ಇಟ್ನಾಳ್, ಪತ್ನಿ ಹಾಗೂ ಮಗಳ ಮೇಲೆ ದೌರ್ಜನ್ಯವೆಸಗುತ್ತಿದ್ದ. ಅಲ್ಲದೇ ಕಂಠಪೂರ್ತಿ ಕುಡಿದು ಬಂದು ಹಿಂಸಿಸಿದ್ದಲ್ಲದೇ ಮಗಳ ಮೇಲೆ ಎಗರಿದ್ದ. ಪತಿಯ ಹುಚ್ಚಾಟಕ್ಕೆ ದಿಕ್ಕು ತೋಚದೆ ಪತ್ನಿ ಸಾವಿತ್ರಿ ಪತಿಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಮಗಳನ್ನು ರಕ್ಷಿಸಿದ್ದಾಳೆ.
ಬಳಿಕ ಶವವನ್ನು ಎರಡು ಭಾಗ ಮಾಡಿ, ಸಾಗಿಸಿ ಬಾವಿಗೆ ಎಸೆದು, ಆತನ ಬಟ್ಟೆ ಸುಟ್ಟುಹಾಕಿ ಮನೆಯಲ್ಲಿಯೂ ಕೊಲೆ ಸುಳಿವು ಸಿಗದಂತೆ ಮಾಡಿದ್ದಳು, ಆದಾಗ್ಯೂ ಶ್ರೀಮಂತ ಇಟ್ನಾಳ್ ಕೊಲೆ ರಹಸ್ಯ ಬಯಲು ಮಾಡಿದ ಚಿಕ್ಕೋಡಿ ಪೊಲೀಸರು ಪತ್ನಿ ಸಾವಿತ್ರಿಯನ್ನು ಬಂಧಿಸಿದ್ದಾರೆ.
 
					 
				 
					 
					 
					 
					
 
					 
					 
					


