Kannada NewsLatest

ಗುರುತಿನ ಚೀಟಿ ನವೀಕರಣ, ಮಾರಾಟ ಪ್ರಮಾಣ ಪತ್ರಕ್ಕೆ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೀನ್‌ದಯಾಳ್ ಅಂತ್ಯೋದಯ ಯೋಜನೆ–ರಾಷ್ಟ್ರೀಯ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಯೋಜನೆಯಡಿ ಬೀದಿಬದಿ ವ್ಯಾಪಾರಸ್ಥರ ಬೆಂಬಲ ಉಪ ಘಟಕದಡಿ ಸಮೀಕ್ಷೆ ಮೂಲಕ ಮತ್ತು ಪಿ.ಎಂ.ಸ್ವನಿಧಿ ಯೋಜನೆಯಡಿ ಎಲ್.ಓ.ಆರ್ ಹೊಂದಿದ ಪೈಕಿ ಹಲವಾರು ಬೀದಿಬದಿ ವ್ಯಾಪರಿಗಳು ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರಗಳನ್ನು ಪಾಲಿಕೆಯಿಂದ ಪಡೆದುಕೊಂಡಿದ್ದಾರೆ.

ಇನ್ನುಳಿದ ಬೀದಿ ಬದಿ ವ್ಯಾಪಾರಿಗಳಿಗಾಗಿ ಗುರುತಿನ ಚೀಟಿಗಳನ್ನು ನವೀಕರಿಸಿಕೊಳ್ಳುವ ಮತ್ತು ಮಾರಾಟ ಪ್ರಮಾಣಪತ್ರ ಪಡೆದುಕೊಳ್ಳುವ ಪ್ರಕ್ರಿಯೆ ನಡೆದಿದೆ. ನಗರದ ಬೀದಿಬದಿ ವ್ಯಾಪಾರಿಗಳು ಗುರುತಿನ ಚೀಟಿ ಹೊಂದಿದವರು ಮರಣಹೊಂದಿದ ಪಕ್ಷದಲ್ಲಿ ವ್ಯಾಪಾರ ಮಾಡುವುದನ್ನು ಬಿಟ್ಟು ಹೋದ ಸಂದರ್ಭದಲ್ಲಿ, ರಹವಾಸಿ ವಿಳಾಸ ಅಥವಾ ಇನ್ನಿತರ ಮಾಹಿತಿಯನ್ನು ನವೀಕರಿಸಿಕೊಳ್ಳುವುದಿದ್ದರೆ ಮತ್ತು ಇನ್ನೂವರೆಗೆ ನಗರದ ಬೀದಿಬದಿ ವ್ಯಾಪಾರಿಗಳ ಪಟ್ಟಿಯಲ್ಲಿ ಹೆಸರನ್ನು ನೊಂದಾವಣಿ ಮಾಡಿಕೊಳ್ಳದವರು ಮಾರ್ಚ್ 14ರೊಳಗಾಗಿ ಪಿ.ಎಂ.ಸ್ವನಿಧಿ ಶಾಖೆ, ಮೊದಲನೆ ಮಹಡಿ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಚೇರಿ ಸಮಯದಲ್ಲಿ ಸಂಪರ್ಕಿಸಬೇಕು.

ಈ ವೇಳೆ ಗುರುತಿನ ಚೀಟಿ, ಮಾರಾಟ ಪ್ರಮಾಣ ಪತ್ರ, ಆಧಾರ್‌ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಸೈಜ್ ಫೋಟೋಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಬರತಕ್ಕದ್ದು ಎಂದು ಮಹಾನಗರ ಪಾಲಿಕೆಯ ಆಯಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
VTU: ಮೂವರಿಗೆ ಡಾಕ್ಟರೇಟ್ ಗೌರವ, 10 ವಿದ್ಯಾರ್ಥಿಗಳಿಗೆ ಚಿನ್ನದ ಪದಕ; 16 ಪದಕ ಪಡೆದ ಚಿನ್ನದ ಹುಡುಗಿ ಯಾರು?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button