*ಬೆಳಗಾವಿ ಜೈನ ಮೈತ್ರಿಕೂಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಬೆಳಗಾವಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಸಂಸ್ಥಾಪಕ ಅಧ್ಯಕ್ಷ ಶಿರ್ಲಾಲು ಬಿ. ಗುಣಪಾಲ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆಯಲ್ಲಿ ನೂತನ ಅಧ್ಯಕ್ಷರಾಗಿ ಮಹಾವೀರ ಪೂವಣಿ ರೆಂಜಾಳ ಅವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ನಿವೃತ್ತ ಪ್ರಾಚಾರ್ಯ ಅಜಿತ್ ಕುಮಾರ್ ಅಣ್ಣಿಂಜೆ ವೇಣೂರು(ಉಪಾಧ್ಯಕ್ಷ), ವೀರೇಂದ್ರ ಹೆಗ್ಡೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಬೆಳಗಾವಿ (ಕಾರ್ಯದರ್ಶಿ), ರಾಜವರ್ಮ ಹೆಗ್ಡೆ ಕಾಂತಾವರ, ಮಹಾವೀರ ಜೈನ್ ನೆಲ್ಲಿಕಾರು ಮತ್ತಿತರರನ್ನು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಧಾರವಾಡ ಎಸ್ ಡಿ ಎಂ ಸಂಸ್ಥೆಯ ಕಾರ್ಯದರ್ಶಿ ಜೀವಂಧರಕುಮಾರ್ ಜೈನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಶ್ರೀ ಚಂದ್ರನಾಥ ಸ್ವಾಮಿ ಬಸದಿಧಾಮ ಸಂಪ್ರೋಕ್ಷಣ ಮತ್ತು ಶ್ರೀ ಮಠದ ನೂತನ ಕಟ್ಟಡದ ಪ್ರಾರಂಭೋತ್ಸವದ ಆಮಂತ್ರಣವನ್ನು ಬಿಡುಗಡೆಗೊಳಿಸಿ ವಿತರಿಸಿ ಕಾರ್ಕಳದ ಕಾರ್ಯಕ್ರಮಕ್ಕೆ ಬೆಳಗಾವಿಯ ಶ್ರಾವಕರನ್ನು ಆಹ್ವಾನಿಸಿದರು.
ಜೈನ ಮೈತ್ರಿಕೂಟದ ಸಂಸ್ಥಾಪಕ ಅಧ್ಯಕ್ಷ ಶಿರ್ಲಾಲು ಬಿ. ಗುಣಪಾಲ ಹೆಗಡೆ ಮಾತನಾಡಿ, ಕಾರ್ಕಳದ ಕಾರ್ಯಕ್ರಮಕ್ಕೆ ಬೆಳಗಾವಿಯ ಜೈನ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಬೇಕು. ಈ ಮೂಲಕ ಈ ಕಾರ್ಯಕ್ರಮವನ್ನು ಐತಿಹಾಸಿಕಗೊಳಿಸಬೇಕು. ದಕ್ಷಿಣ ಕನ್ನಡ ಜೈನ ಮೈತ್ರಿಕೂಟ ಬೆಳಗಾವಿಯಲ್ಲಿ ಸ್ಥಾಪನೆಯಾಗಿ 10 ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ಸಾಕಷ್ಟು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಗಮನ ಸೆಳೆದಿದ್ದೇವೆ. ಮುಂದಿನ ದಿನಗಳಲ್ಲಿ ಮೈತ್ರಿಕೂಟ ಇನ್ನಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಿ ಇತರ ಸಂಘ ಸಂಸ್ಥೆಗಳಿಗೆ ಆದರ್ಶವಾಗಿ ನಿಲ್ಲಬೇಕು ಎಂದು ತಿಳಿಸಿದರು.
ನಮೋಕಾರ ಮಂತ್ರ ಪಠಿಸಲಾಯಿತು.ನಿವೃತ್ತ ಪ್ರಾಚಾರ್ಯ ಅಜಿತ್ ಕುಮಾರ್ ಸ್ವಾಗತ ಮತ್ತು ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ