Kannada NewsKarnataka NewsLatest

*ಮಹಿಳಾ ಕಂಡಕ್ಟರ್ ಗೆ ಬಸ್ ನಲ್ಲಿ ಪ್ರಯಾಣಿಕಳಿಂದ ಚಾಕು ಇರಿತ*

ಪ್ರಗತಿವಾಹಿನಿ ಸುದ್ದಿ: ಮಹಿಳಾ ಕಂಡಕ್ಟರ್ ಮೇಲೆ ಮಹಿಳಾ ಪ್ರಯಾಣಿಕರೊಬ್ಬರು ಚಾಕುವಿನಿಂದ ಇರುದು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬಿಎಂಟಿಸಿ ಬಸ್ ನಲ್ಲಿ ನಡೆದಿದೆ.

ಸುಕನ್ಯಾ ಗಂಭೀರವಾಗಿ ಗಾಯಗೊಂಡಿರುವ ಮಹಿಳಾ ಕಂಡಕ್ಟರ್. ನಾಗನೂರಿನಿಂದ ಮೆಜೆಸ್ಟಿಕ್ ಮಾರ್ಗವಾಗಿ ಸಾಗುತ್ತಿದ್ದ ಡಿಪೋ ನಂ.40ಕ್ಕೆ ಸಿದ ಬಿಎಂಟಿಸಿ ಬಸ್ ನಲ್ಲಿ ಈ ಘಟನೆ ನಡೆದಿದೆ.

Home add -Advt

ಟಿಕೆಟ್ ವಿಚಾರವಾಗಿ ಗಲಾಟೆ ನಡೆದು ಮಹಿಳಾ ಪ್ರಯಾಣಿಕರೊಬ್ಬರು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾಳೆ. ಮಹಿಳೆಯೊಬ್ಬರು ಟಿಕೆಟ್ ಪಡೆಯದೇ ಬಸ್ ನಲ್ಲಿ ಕುಳಿತಿದ್ದಳು. ಮಹಿಳಾ ಕಂಡಕ್ಟರ್ ಟಿಕೆಟ್ ಪಡೆಯುವಂತೆ ಹೇಳಿದ್ದಾರೆ. ಇದೇ ವಿಚಾರವಾಗಿ ಮಹಿಳೆ ಹಾಗೂ ಮಹಿಳಾ ಕಂಡಕ್ಟರ್ ನಡುವೆ ವಾಗ್ವಾದ ಆರಂಭವಾಗಿದ್ದು, ಮಹಿಳೆ ತನ್ನ ಬಳಿ ಇದ್ದ ಚಾಕುವಿನಿಂದ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾಳೆ.

ಗಂಭೀರವಾಗಿ ಗಾಯಗೊಂಡಿರುವ ಕಂಡಕ್ಟರ್ ಗೆ ನೆಲಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಕಂಡಕ್ಟರ್ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Related Articles

Back to top button