ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಆರ್ಕಿಟೆಕ್ಚರ್ ವಿಭಾಗ, ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಭಾಗದಿಂದ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಆಯೋಜಿಸಲಾಯಿತು.
ಪ್ರದರ್ಶನವನ್ನು ಮುಖ್ಯ ಅತಿಥಿ ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕ ರಾಜೇಶ್ ಕುಮಾರ್ ಮೌರ್ಯ ಉದ್ಘಾಟಿಸಿದರು. ಪಿ.ಎಸ್. ಸಾವಕಾರ, ಅಧ್ಯಕ್ಷರು, ಕೆಎಲ್ಎಸ್, ಬೆಳಗಾವಿ, ರಾಜೇಂದ್ರ ಬೆಳಗಾಂವಕರ್, ಅಧ್ಯಕ್ಷರು ಕೆಎಲ್ಎಸ್ ಜಿಐಟಿ, ಬೆಳಗಾವಿ, ಪ್ರಾಂಶುಪಾಲರಾದ ಡಾ. ಜಯಂತ್ ಕಿತ್ತೂರು, ಮತ್ತು ಡಾ.ರೂಪಾಲಿ ಕವಿಲ್ಕರ್, ಆರ್ಕಿಟೆಕ್ಚರ್ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
ಈ ಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಕೃತಿಗಳನ್ನು ಪ್ರದರ್ಶಿಸಲಾಗಿದೆ. ವಿನ್ಯಾಸ ಮತ್ತು ನಿರ್ಮಾಣ ಪೋರ್ಟ್ಫೋಲಿಯೊಗಳು, ಇತಿಹಾಸ ಮಾದರಿಗಳು ಮತ್ತು ಮೊನೊಗ್ರಾಫ್ ಗಳು, ವರ್ಕಿಂಗ್ ಡ್ರಾಯಿಂಗ್ ಗಳು, ಪ್ರಬಂಧ ರೇಖಾಚಿತ್ರಗಳು ಮತ್ತು ನಾಸಾ ಟ್ರೋಫಿಕಾರ್ಯಗಳ ಭಾಗವಾಗಿ ಮಾಡಿದ ಕೆಲಸಗಳ ಜೊತೆಗೆ ವಿವಿಧ ಸ್ಪರ್ಧೆಗಳು ಮತ್ತು ವೇದಿಕೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಗಳ ಮಾದರಿಗಳು ಈ ಪ್ರದರ್ಶನದಲ್ಲಿವೆ.
ವಿದ್ಯಾರ್ಥಿಗಳ ಕಲಾಕೃತಿಗಳನ್ನು ಅತಿಥಿಗಳು ಹಾಗೂ ಗಣ್ಯರು ಶ್ಲಾಘಿಸಿದರು. ವಿಭಾಗದ ಮುಖ್ಯಸ್ಥೆ ಡಾ.ರೂಪಾಲಿ ಕವಿಲಕರ್ ಅವರ ಮಾರ್ಗದರ್ಶನದಲ್ಲಿ ಪ್ರೊ.ಜ್ಯೋತಿ ಪಾಟೀಲ್, ಪ್ರೊ.ಅರ್ಚನಾ ಪಾಟೀಲ್, ಪ್ರೊ.ಪ್ರಸಾದ್ ಕುಲಕರ್ಣಿ, ಪ್ರೊ.ಸೌಮ್ಯ ಹರಿತಾಯ್ ಮತ್ತು ಪ್ರೊ.ಸಯಾಲಿ ಪಾಟೀಲ್-ಅಕ್ನೋಜಿ ಅವರು ಪ್ರದರ್ಶನವನ್ನು ಸಂಯೋಜಿಸಿದರು. ಕೆಎಲ್ಎಸ್ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಪ್ರದರ್ಶನವು ಸಾರ್ವಜನಿಕ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.
ಅಥಣಿ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ