Kannada NewsLatest

ವಿವಾದಾತ್ಮಕ ಪುಸ್ತಕ ಬಿಡುಗಡೆ; ಮಹಾ ಸರ್ಕಾರದ ವಿರುದ್ಧ ಕರವೇ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಾರಾಷ್ಟ್ರ- ಕನಾ೯ಟಕ ಸೀಮಾವಾದ ಸಂಘಷ೯ ಸಂಕಲ್ಪ ಎಂಬ ವಿವಾದಾತ್ಮಕ ಪುಸ್ತಕವನ್ನು ಇಂದು ಮಹಾರಾಷ್ಟ್ರ ಸರ್ಕಾರ ಬಿಡುಗಡೆಗೊಳ್ಳಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ವಾಲ್ಮೀಕಿ ವೃತ್ತದಲ್ಲಿ ಸೇರಿ ಮಹಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪುಸ್ತಕದ ಮುಖ ಪುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ಮುಗುಟ ಪೈಲ್ವಾನ್, ರಮೇಶ ಕಮತಿ, ಶೆಟ್ಟೆಪ್ಪಾ ಗಾಡಿವಡ್ಡರ, ಮಹಾದೇವ ಮಕ್ಕಳಗೇರಿ, ಕಿರಣ ತೊಗರಿ, ಅಶೋಕ ಬಂಡಿವಡ್ಡರ, ಬಸು ಗಾಡಿವಡ್ಡರ, ರಾಮ ಕುಡೆಮ್ಮಿ , ಶೆಟ್ಟೆಪ್ಪಾ ಡಬಾಜ , ರಾಮ ಕೊಂಗನ್ನೊಳ್ಳಿ, ಈರಪ್ಪಾ ಕೋಳಿ, ಬಸು ತೇಲಿ, ನಾಗರಾಜ ಬಂಡಿವಡ್ಡರ, ದುರ್ಗಪ್ಪಾ ಬಂಡಿವಡ್ಡರ, ಗಣಪತಿ ಜಾಗನೂರ, ಮಾಳಪ್ಪಾ ಮಾಳೇದರ, ಮಾಳಪ್ಪಾ ಹಣಜಿ , ಹಣಮಂತ ಕಮತಿ, ವಿಠ್ಠಲ ನಾಯಿಕ , ಆನಂದ ಬಿರಡಿ , ಹಣಮಂತ ಅಮ್ಮಣಗಿ ಮೌನೇಶ ಲೋಣಾರೀ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button