ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಚಿಕ್ಕೊಡಿಯ ಕೆ. ಎಲ್. ಇ. ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸೃಜನಶೀಲ ಬೋಧನೆ ಹಾಗೂ ಕಲಿಕಾ ಪ್ರಕ್ರಿಯೆ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಅಥಿತಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಹಿರಿಯ ಶಿಕ್ಷಕರು ಹಾಗೂ ಶಿಕ್ಷಣತಜ್ಞ ಸುರೇಶ ಕುಲಕರ್ಣಿ ಮಾತನಾಡಿ-ಇಂದಿನ ಬೋಧನಾ ಪದ್ಧತಿ ಅನ್ವಯಿಸುವಿಕೆ ಹಾಗೂ ಕೌಶಲ ಬೆಳೆಸುವಲ್ಲಿ ವಿಫಲವಾಗಿದೆ. ವಿದ್ಯಾರ್ಥಿಗಳಲ್ಲಿ ನೆನಪಿನ ಶಕ್ತಿ ಹಾಗೂ ತಿಳಿಸುವಿಕೆಗೆ ಒತ್ತು ನೀಡುತ್ತಿದೆ. ಶಿಕ್ಷಣದಲ್ಲಿ ಪ್ರಾಯೋಗಿಕತೆ ಕಡಿಮೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳು ಮಂದರಾಗುತ್ತಿದ್ದಾರೆ. ಪ್ರತಿಯೊಬ್ಬರಲ್ಲಿ ಸಾಮರ್ಥ್ಯ ಇದೆ ಆದರೆ ಪ್ರಯತ್ನ ಮತ್ತು ಅವಲೋಕನ ಕಡಿಮೆಯಾಗಿದೆ ಎಂದು ಹೇಳಿದರು.
ನಮ್ಮ ಮೆದುಳಿನಲ್ಲಿ 100 ಕೋಟಿ ಜಿ.ಬಿ. ಯಷ್ಟು ಮಾಹಿತಿಯನ್ನು ಕಲೆಹಾಕುವ ಸಾಮರ್ಥ್ಯ ಇದೆ. ಆದರೆ ಚರ್ಚೆ, ಬರವಣೆಗೆ, ಜೋರಾಗಿ ಓದುವುದು, ಕಲಿಕೆಯಲ್ಲಿ ಭಾವನಾಶುನ್ಯತೆ ಇವುಗಳಿಂದಾಗಿ ನೆನಪಿನ ಶಕ್ತಿ ಕುಂಠಿತಗೊಂಡಿದೆ. ಇಂದು 15 ರಿಂದ 30 ವರ್ಷದ ಯುವಕರಿಗೆ ಸೋಮಾರಿತನ ಕಾಡುತ್ತಿದೆ. ಇದರಿಂದಾಗಿ ಮುಂದುಡುವ ಪ್ರವೃತ್ತಿ ಹಾಗೆಯೇ ನಮ್ಮ ವಿಫಲತೆಗೆ ಬೇರೆಯವರನ್ನು ದೂಷಿಸುವುದು ಹೆಚ್ಚಾಗಿದೆ. ಇಂದು ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆಯಾಗಿದೆ. ಜ್ಞಾನ ಪಡೆದು ಅದನ್ನು ಹಂಚಲು ವಿನಯತೆ ಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶರಾಗಿ, ಕೇವಲ ತಮ್ಮ ವಿಷಯ ಬೋಧನೆಗೆ ಸಿಮಿತವಾಗದೇ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ – ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಇಂತಹ ಸಂಪನ್ಮೂಲ ವ್ಯಕ್ತಿಗಳಿಂದ ಪಡೆದ ಮಾರ್ಗದರ್ಶನವನ್ನು ಕೇವಲ ಆಲಿಸದೇ ಅವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಥಮ ವರ್ಷದ ಸಂಯೋಜಕ ಡಾ. ಆರ್. ಕೆ. ಪಾಟೀಲ, ಪ್ರೊ. ಸಚೀನ ಮೆಕ್ಕಳಕಿ, ಪ್ರೊ. ವಿ. ಎಸ್. ಪಾಟೀಲ, ಡಾ. ಅರವಿಂದ ದೇಶಿ, ಪ್ರೊ. ಪ್ರಿಯಾಂಕಾ ಟೊನಗೆ, ಪ್ರೊ. ಆರತಿ ಪಲ್ಲಕ್ಕೆ, ದಾನಮ್ಮ ಗಾಣಿಗೇರ ಉಪಸ್ಥಿತರಿದ್ದರು.
ನೇಮಕಾತಿ ಅಧಿಕಾರಿ ಪ್ರೊ. ಮಹೇಶ ಲಟ್ಟೆ ಕಾರ್ಯಕ್ರಮವನ್ನು ಸಂಯೋಜಿಸಿದರು. ಕು. ಸುಮೇಧಾ ಸದಾಶಿವ ಸ್ವಾಗತಿಸಿದರು.
ಕು. ದಿವ್ಯಾ ಪುಜೇರಿ ಅಥಿತಿಗಳನ್ನು ಪರಿಚಯಿಸಿದರು. ಕು. ಶ್ರೇಯಾ ಕಿತ್ತೂರ, ನಿಶ್ಮಿತಾ ಸಂಗೋಟೆ ನಿರೂಪಿಸಿದರು. ಕು. ಪೂರ್ವಾ ಹವಾಲ್ದಾರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ