*ಕೆಎಲ್‌ಎಸ್ ಜಿಐಟಿಯಲ್ಲಿ ಉಸ್ತಾದ್ ರಫೀಕ್ ಖಾನ್ ರಿಂದ ಸಿತಾರ್ ವಾದನ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್‌ಎಸ್ ಗೊಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬೆಳಗಾವಿ, ಸ್ಪಿಕ್ಮ್ಯಾಕೆ(ಸೊಸೈಟಿ ಆಫ್ಪ್ರಮೋಷನ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಆಂಡ್ ಕಲ್ಚರ್ ಮಾಂಗ್ಸ್ಟ್ಯೂತ್) ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಸಿತಾರವಾದಕ, ಉಸ್ತಾದ್ ಫ್ರೀಕ್ಖಾನ್ ಅವರ ಸಿತಾರ್ ವಾದನ ಕಾರ್ಯಕ್ರಮ ನವೆಂಬರ್ 8, 2023 ರಂದು ಮಧ್ಯಾಹ್ನ 3 ಗಂಟೆಗೆ ಸಿಲ್ವರ್ ಜುಬಿಲಿ ಆಡಿಟೋರಿಯಂನಲ್ಲಿ ಆಯೋಜಿಸಿದೆ.
ಉಸ್ತಾರ್ ರಫಿಕ್ ಖಾನ್ ಅವರು, ಏಳು ತಲೆಮಾರುಗಳು ಸಿತಾರ್ ನುಡಿಸುವ ಕುಟುಂಬಕ್ಕೆ ಸೇರಿದವರು. ಅವರು ಆರಂಭದಲ್ಲಿ ಅವರ ತಂದೆ ಉಸ್ತಾದ್ ಅಬ್ದುಲ್ ಕರೀಂಖಾನ್ ಮತ್ತು ನಂತರ ಉಸ್ತಾದ್ ಬಾಲೆಖಾನ್ ಮತ್ತು ಉಸ್ತಾದ್ ದಸ್ತಗೀರ್ ಖಾನ್ ಅವರಿಂದ ತರಬೇತಿ ಪಡೆದರು. ಅವರು ಆಲ್ ಇಂಡಿಯಾ ರೇಡಿಯೊದಿಂದ ಉನ್ನತ ದರ್ಜೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಅವರು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಸಿತಾರ್ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಗುರುಮೂರ್ತಿ ವೈದ್ಯ ತಬಲಾ ಸಾಥ್ ನೀಡಲಿದ್ದಾರೆ. ಅವರು ಪಂ.ಜಿ.ಜಿ.ಹೆಗ್ಡೆ, ಪಂ.ಬಸವರಾಜ ಬೆಂಡಿಗೆರೆ ಮತ್ತು ಪಂ.ರವೀಂದ್ರ ಯಾವಗಲ್ ಅಡಿಯಲ್ಲಿ ತರಬೇತಿ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿ ನೀಡಲು ನಾದ ಫೌಂಡೇಶನ್ ಆರಂಭಿಸಿದ್ದಾರೆ.
ಆಸಕ್ತ ಸಂಗೀತ ಪ್ರೇಮಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ