Belagavi NewsBelgaum NewsCrimeKannada NewsKarnataka NewsLatest

*BIG BREAKING: ಬೆಳಗಾವಿಯಲ್ಲಿ ಮತ್ತೆ ಚಾಕು ಇರಿತ: ಹಾಡಹಗಲೇ ಯುವಕನಿಗೆ ಇರಿದು ಪರಾರಿ*

ಪ್ರಗತಿವಾಹಿನಿ ಸುದ್ದಿ: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ ನಡೆದಿದೆ. ಹಾಡಹಗಲೇ ಬೆಳಗಾವಿ ನಗರದಲ್ಲಿ ಯುವಕನೊಬ್ಬನಿಗೆ ಚಾಕು ಇರಿದ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಒಂದು ತಿಂಗಳ ಹಿಂದಷ್ಟೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಮುಜಾಮ್ಮಿಲ್ ಎಂಬಾತ 18 ವರ್ಷದ ಯುವಕ ಜುಶಾನ್ ಚಾವುಸ್ ಎಂಬುವವನಿಗೆ ಚಾಕು ಇರಿದಿದ್ದಾನೆ. ಬೆಳಗಾವಿಯ ನ್ಯೂ ಗಾಂಧಿನಗರದ ಮಸೀದಿ ಬಳಿ ಈ ಘಟನೆ ನಡೆದಿದೆ.

ಗಂಭೀರವಾಗಿ ಹಲ್ಲೆಗೊಳಗಾದ ಜುಶಾನ್ ನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಾರಿಯಾಗಿದ್ದ ಆರೋಪಿ ಮುಜಾಮ್ಮಿಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮಾಳಮಾರುತಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Home add -Advt

ಕೆಲವೇ ದಿನಗಳ ಹಿಂದಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ ಮೃಣಾಲ್ ಹೆಬ್ಬಾಳಕರ್ ಕಾರು ಚಾಲಕ ಬಸವಂತ್ ಕಡೋಲ್ಕರ್ ಎಂಬುವವರಿಗೆ ದುಷ್ಕರ್ಮಿಗಳು ಚಾಕು ಇರಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಬೆಳಗಾವಿ ನಗರದಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ ನಡೆದಿದ್ದು, ಜಿಲ್ಲೆಯ ಜನರನ್ನು ಆತಂಕಕ್ಕೀಡುಮಾಡಿದೆ.

Related Articles

Back to top button