ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಖಾನಾಪುರ ತಾಲೂಕಿನ ಹರಶಿನವಾಡಾ ಗ್ರಾಮದ ಆದಿವಾಸಿಗಳಿಗೆ ಗುರುವಾರಕಿರಾಣಿ ಸಾಮಗ್ರಿಗಳ ಕಿಟ್ ಒದಗಿಸಿಕೊಡುವ ಮೂಲಕ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಹೊಸ ಇತಿಹಾಸ ದಾಖಲಿಸಿದೆ.
ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್‌ನ ಮುಖ್ಯಸ್ಥ ಸಂತೋಷಧರೇಕರ ನೇತೃತ್ವದಲ್ಲಿಜಿಲ್ಲಾ ಲೇಖಕಿಯರ ಸಂಘದಅಧ್ಯಕ್ಷೆ ಹೇಮಾವತಿ ಸುನ್ನೊಳ್ಳಿ, ಕೋಶಾಧಿಕಾರಿಇಂದಿರಾ ಮೋಟೆಬೆನ್ನೂರು ಹಾಗೂ ಸದಸ್ಯರಾದ ನಿರ್ಮಲಾ ಬಟ್ಟಲ್‌ಅವರು ಈ ಸಂದರ್ಭದಲ್ಲಿದ್ದರು.
ಖಾನಾಪುರ ಪಟ್ಟಣದಿಂದ ಸುಮಾರು 12 ಕಿ.ಮೀ ದೂರದ ಅರಣ್ಯ ಪ್ರದೇಶದಲ್ಲಿರುವ ಹರಶಿನವಾಡಿ ಗ್ರಾಮದಅರಣ್ಯ ಪ್ರದೇಶದಲ್ಲಿಗುಡಿಸಲು ನಿರ್ಮಿಸಿ ಸುಮಾರು 200 ಮಂದಿ ಆದಿವಾಸಿಗಳು ಜೀವನ ಸಾಗಿಸುತ್ತಿದ್ದು ಮತದಾನ ಹಕ್ಕು ಹೊಂದಿದ್ದರೂ ಇಲ್ಲಿ ಈ ತನಕಯಾವುದೇ ಮೂಲಭೂತ ಸೌಲಭ್ಯವೂ ಸಿಕ್ಕಿಲ್ಲ. ಅಕ್ಕಪಕ್ಕದಗ್ರಾಮದಲ್ಲಿಕಬ್ಬು ನೀಲಗಿರಿಕಡಿಯುವ ಕೂಲಿ ಕೆಲಸಕ್ಕೆ ತೆರಳಿ ಬದುಕು ಸಾಗಿಸುವ ಈ ಅರಣ್ಯವಾಸಿಗಳಿಗೆ ಫೇಸ್‌ಬುಕ್ ಫ್ರೆಂಡ್ ಸರ್ಕಲ್ ವತಿಯಿಂದ ದಾನಿಗಳ ನೆರವಿನಿಂದ ಪ್ರತೀ ಮೂರು ತಿಂಗಳಿಗೊಮ್ಮೆ ದಿನಸಿ ಸಾಮಗ್ರಿಒದಗಿಸಲಾಗುತ್ತಿದೆ. ಈ ಬಾರಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದಿAದ ಸುಮಾರು 16,500 ರೂ. ಮೌಲ್ಯದಕಿರಾಣಿ, ತರಕಾರಿ ಸೇರಿದಂತೆಆಹಾರ ಪದಾರ್ಥಒದಗಿಸಲಾಯಿತು.
ಪತ್ರಕರ್ತೆಕೀರ್ತಿಶೇಖರ್, ಸಮಾಜ ಸೇವಕರಾದಗಣೇಶರೋಕಡೆ, ಗಣೇಶ ವೆಮೋಲ್ಕರ್, ವಿಶಾಲ ಪಾಟೀಲ, ರಾಹುಲ ಪಾಟೀಲ, ನಕುಲ ತುಮರಿ, ರಾಜುಕಾಕತಿ ಮತ್ತಿತರರು ಇದ್ದರು.
ಬ್ರಾಹ್ಮಣರು ತಲವಾರ ಹಿಡಿಯಲೂ ಸಿದ್ಧ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ