ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಾರಿ ನಿರ್ದೇಶನಾಲಯ (ಇಡಿ) ಹೆಸರಲ್ಲಿ ರಾಷ್ಟ್ರೀಯ ಬ್ಯಾಂಕ್ ಗಳ ಮ್ಯಾನೇಜರ್ ಹಾಗೂ ಗ್ರಾಹಕರನ್ನು ವಂಚಿಸುತ್ತಿದ್ದ ಖತರ್ನಾಕ್ ವ್ಯಕ್ತಿಯೋರ್ವನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಖಾಸಗಿ ಇನ್ಶೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬೆಳಗಾವಿ ಶಾಸ್ತ್ರಿ ನಗರದ ನಿವಾಸಿ ಮಧುಕರ್ ಸಪಳೆ ಎಂದು ಗುರುತಿಸಲಾಗಿದೆ.
ಬೆಳಗಾವಿಯ 7 ಬ್ಯಾಂಕ್ ಗಳಿಗೆ ಜಾರಿ ನಿರ್ದೇಶನಾಲಯ ಹೆಸರಲ್ಲಿ ನೋಟೀಸ್ ನೀಡಿ ತನಗಾದವರ ಅಕೌಂಟ್ ಫ್ರೀಜ್ ಮಾಡಿಸುತ್ತಿದ್ದ. ಅಷ್ಟೇ ಅಲ್ಲ ತನ್ನ ಸಂಬಂಧಿಗಳು ಹಾಗೂ ಪರಿಚಯದಸ್ಥರ ಬಳಿ ಸಾಲ ಮಾಡಿದ್ದ ಮಧುಕರ್ ಸಾಲ ಕೊಟ್ಟವರು ಹಣ ವಾಪಸ್ ಕೇಳಿದರೆ ಸಾಲಕೊಟ್ಟವರ ಖಾತೆಗಳಿರುಅ ಬ್ಯಾಂಕ್ ಗಳಿಗೆ ಇಡಿ ಹೆಸರಲ್ಲಿ ಫೇಕ್ ನೋಟೀಸ್ ನೀಡುತ್ತಿದ್ದ.
ಬೆಳಗಾವಿ ನಗರದ ಯೂನಿಯನ್ ಬ್ಯಾಂಕ್, ಐಡಿಬಿಐ, ಎಸ್ ಬಿಐ ಬ್ಯಾಂಕ್, ಖಾನಾಪುರದ ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಂಕೇಶ್ವರದ ಬ್ಯಾಂಕ್ ಗೆ ಇಡಿ ಹೆಸರಲ್ಲಿ ನೋಟೀಸ್ ನೀಡಿದ್ದ. ಈ ಕುರಿತು ಬೆಳಗಾವಿ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಆರೋಪಿ ಮಧುಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ