Latest

ಅಕ್ರಮ ಮದ್ಯ ಮಾರಾಟ; ಓರ್ವ ಆರೋಪಿ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಕ್ರಮವಾಗಿ ಗೋವಾ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸರು ಬಂಧಿಸಿದ್ದಾರೆ.

ಖಾನಾಪುರ ಠಾಣೆ ವ್ಯಾಪ್ತಿಯ ಕಣಕಂಬಿ ಬಳಿ ವಾಹನ ತಪಾಸಣೆ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 933320 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಅಬಕಾರಿ ಅಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಳಗಾವಿ ಅಬಕಾರಿ ಆಯುಕ್ತ ಡಾ.ವೈ ಮಂಜುನಾಥ, ಅಬಕಾರಿ ಜಂಟಿ ಆಯುಕ್ತರು ಪಿರೋಜ್ ಖಾನ್ ಖಿಲ್ಲೇದಾರ ಅವರ ಆದೇಶದಂತೆ ಬೆಳಗಾವಿ ಜಿಲೆ ದಕ್ಷಿಣ ವಿಭಾಗದ ಅಬಕಾರಿ ಉಪ ಆಯುಕ್ತ ಜಯರಾಮೇಗೌಡ, ಅಬಕಾರಿ ಉಪ ಅಧೀಕ್ಷಕರು ಸಿ.ಎಸ್ ಪಾಟೀಲ್, ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಅಬಕಾರಿ ನಿರೀಕ್ಷಕ ದಾವಲಸಾಬ ಶಿಂದೋಗಿ, ಸದಾಶಿವ ಕೊರ್ತಿ, ಅಬಕಾರಿ ಉಪ ನಿರೀಕ್ಷಕ ಜಯರಾಮ ಹೆಗಡೆ, ಪುಷ್ಪಾ ಗದಾಡೆ, ಸಿಬ್ಬಂದಿಗಳಾದ ಮಂಜುನಾಥ್ ಬಳಗಪ್ಪನವರ, ಈರನ್ಣ ಗಾಳಿ, ಪ್ರಕಾಶ ಡೋಣಿ, ಅರುಣಕುಮರ್ ಬಂಡಿಗಿ, ರಾಯಪ್ಪ ಮಣ್ಣಿಕೇರಿ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Home add -Advt

ಕ್ವಾರಿಯಲ್ಲಿ ಕಾಲು ಜಾರಿ ಬಿದ್ದ ಇಬ್ಬರು ಬಾಲಕರು ದುರ್ಮರಣ

https://pragati.taskdun.com/latest/two-boysdeathkoppala/

Related Articles

Back to top button