Kannada NewsLatest

ಉಪಚುನಾವಣೆ; ಮತದಾನ ಮಾಡಿದ ಅಭ್ಯರ್ಥಿಗಳು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಮತದಾನ ಬಿರುಸುಪಡೆದುಕೊಂಡಿದೆ.

ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅವರ ಪತ್ನಿ ಮಂಗಳಾ ಅಂಗಡಿ ಬಿಜೆಪಿಯಿಂದ ಸ್ಪರ್ಧಿಸಿದ್ದು, ಬೆಳಿಗ್ಗೆಯೇ ಮತಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

ವಿಶ್ವೇಶ್ವರಯ್ಯ ನಗರದ ಸರ್ಕಾರಿ ಶಾಲೆ ಮತಗಟ್ಟೆ 3ರಲ್ಲಿ ಮಂಗಳಾ ಅಂಗಡಿ ಮತದಾನ ಮಾಡಿದರು.

ಮಸ್ಕಿಯಲ್ಲಿಯೂ ಬಿರುಸಿನ ಮತದಾನ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ತುರವಿಹಾಳ ಪಟ್ಟಣದ 217ರ ಮತಗಟ್ಟೆಯಲಿ ಮತದಾನ ಮಾಡಿದರು.

Home add -Advt

ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಅವರು ಸಂಜೆ 6 ಗಂಟೆಗೆ ಹಕ್ಕುಚಲಾಯಿಸಲಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ ಬಸವಕಲ್ಯಾಣದ ಎಪಿಎಂಸಿ ಯಾರ್ಡ್ ನ ಮತಗಟ್ಟೆ ಸಂಖ್ಯೆ 99/ಎ ನಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

Related Articles

Back to top button