
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಕೆಲ ದಿನಗಳ ಹಿಂದೆ ಎಂಬಿಎ ವಿದ್ಯಾರ್ಥಿನಿ ಐಶ್ವರ್ಯಾ ಲಕ್ಷ್ಮೀ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರೀತಿಸಿದ ಯುವಕ ಕೈಕೊಟ್ಟು ಮತ್ತೋರ್ವ ಯುವತಿಯ ಹಿಂದೆ ಬಿದ್ದಿದ್ದೇ ಯುವತಿ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.
ಮೃತ ಐಶ್ವರ್ಯಾ ಲಕ್ಷ್ಮೀ ಹಾಗೂ ಆಕೆ ಪ್ರೀತಿಸುತ್ತಿದ್ದ ಯುವಕ ಆಕಾಶ್ ಇಬ್ಬರೂ ವಿಜಯಪುರ ಜಿಲ್ಲೆಯ ಚಡಚಣದವರು. ಐಶ್ವರ್ಯ ಹಾಗೂ ಆಕಾಶ್ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಆಕಾಶ್ ಐಶ್ವರ್ಯಾಳನ್ನು ಬಿಟ್ಟು ಬೇರೊಂದು ಯುವತಿ ಹಿಂದೆ ಬಿದ್ದಿದ್ದ.
ಇದರಿಂದ ತೀವ್ರವಾಗಿ ಮನನೊಂದಿದ್ದ ಐಶ್ವರ್ಯ, ಅಂದು ಆತ್ಮಹತ್ಯೆಗೂ ಮುನ್ನ ಯುವಕ ಆಕಾಶ್ ಗೆ ತನ್ನ ಸಾವಿಗೆ ನೀನು ಹಾಗೂ ಇನ್ನೋರ್ವ ಯುವತಿಯೇ ಕಾರಣ ಎಂದು ಮೆಸೇಜ್ ಹಾಕಿದ್ದಳು. ಬಳಿಕ ರೂಮಿಗೆ ಬಂದು ನೇಣಿಗೆ ಶರಣಾಗಿದ್ದಳು.
ಮೆಸೇಜ್ ಹಾಕುತ್ತಿದ್ದಂತೆ ಐಶ್ವರ್ಯಾ ಪಿಜಿ ರೂಮಿಗೆ ಬಂದ ಆಕಾಶ್ ಬಾಗಿಲು ಒಡೆದು ಆಕೆಯ ಮೊಬೈಲ್ ಕದ್ದು ಪರಾರಿಯಾಗಿದ್ದ. ಐಶ್ವರ್ಯ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಐಶ್ವರ್ಯಾ ಸಾವಿಗೆ ಕಾರಣ ಪತ್ತೆಮಾಡಿದ್ದು, ಆಕಾಶ್ ನನ್ನು ವಶಕ್ಕೆ ಪಡೆದಿದ್ದಾರೆ.