Kannada NewsLatest

ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮಾತೃವಿಯೋಗ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಯುಗಾದಿ ಹಬ್ಬದ ದಿನದಂದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ತಾಯಿ ಸೇವಂತಾ ಹರದಾರೆ (90) ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸೇವಂತಾ ಹರದಾರೆ ಕೆಲ ದಿನಗಳಿಂದ ಮಹಾರಾಷ್ಟ್ರದ ಕೊಲ್ಹಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವೆ ಶಶಿಕಲಾ ಜೊಲ್ಲೆ, ನನ್ನ ಜೀವನದ ಪ್ರೇರಣಾ ಶಕ್ತಿ, ಪ್ರತಿ ಯಶಸ್ಸಿನ ಏಳು-ಬೀಳಿನಲ್ಲೂ ಸದಾ ನನ್ನೊಂದಿಗಿರುತ್ತಿದ್ದ ದಾರಿದೀಪ, ನನ್ನನ್ನು ರೂಪಿಸಿದ ಮಾತೃಶ್ರೀ ಅವರು ಇಂದು ನಮ್ಮೊಂದಿಗಿಲ್ಲ. ವಯೋಸಹಜ ಅನಾರೋಗ್ಯದಿಂದಾಗಿ ಮಾತೃಶ್ರೀ ಶ್ರೀಮತಿ ಸೇವಂತಾ ಹರದಾರೆ (90) ಅವರು ಇಂದು ದೈವಾಧೀನರಾಗಿದ್ದಾರೆ. ಜೀವ-ಜೀವನ ರೂಪಿಸಿ, ನನ್ನಮ್ಮ ತಿಳಿಸಿಕೊಟ್ಟ ಜೀವನದ ಮೌಲ್ಯಗಳು, ಅವರ ಮಾರ್ಗದರ್ಶನ, ನೆನಪು ಎಂದೆಂದಿಗೂ ನನ್ನ ಮನದಲ್ಲಿ ಚಿರಸ್ಥಾಯಿ. ನನ್ನ ಜೀವನದ ಸ್ಫೂರ್ತಿಯಾಗಿದ್ದ ನನ್ನಮ್ಮ ಇನ್ನು ನೆನಪು ಮಾತ್ರ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

Home add -Advt

Related Articles

Back to top button