ವಿವಾದಕ್ಕೆ ಕಾರಣವಾದ ವಿಶ್ವ ಆರೋಗ್ಯ ಸಂಸ್ಥೆಯ ಮ್ಯಾಪ್, ಜಮ್ಮು, ಕಾಶ್ಮೀರ ಚೀನಾ ಮತ್ತು ಪಾಕಿಸ್ತಾನಕ್ಕೆ ಸೇರ್ಪಡೆ !

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ಕೋವಿಡ್ -೧೯ ಅಂಕಿ ಸಂಖ್ಯೆಗಳನ್ನು ವಿವರಿಸುವ ಜಾಗತಿಕ ಭೂಪಟದಲ್ಲಿ (ಕೋವಿಡ್ ಡ್ಯಾಶ್ ಬೋರ್ಡ್) ಜಮ್ಮು, ಕಾಶ್ಮೀರವನ್ನು ಪಾಕಿಸ್ತಾನ ಮತ್ತು ಚೀನಾಕ್ಕೆ ಸೇರಿದಂತೆ ಚಿತ್ರಿಸಲಾಗಿದ್ದು ಭಾರಿ ವಿವಾದಕ್ಕೆ ಕಾರಣವಾಗುತ್ತಿದೆ.

ಈ ಕುರಿತು ತೃಣಮೂಲ ಕಾಂಗ್ರೆಸ್‌ನ ಸಂಸದ ಡಾ. ಸಂತನು ಸೇನ್ ಗಮನ ಸೆಳೆದಿದ್ದಾರೆ. ಅಲ್ಲದೇ ನಕಾಶೆಯ ಚಿತ್ರ ಸಮೇತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಡಾ. ಸಂತನು ಹೇಳಿದ್ದೇನು ?

ವಿಶ್ವದಾದ್ಯಂತ ಕೋವಿಡ್-೧೯ ಅಂಕಿ ಸಂಖ್ಯೆಗಳನ್ನು ವಿವರಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಭೂಪಟ ಸಿದ್ಧಪಡಿಸಿದೆ. ಇದರಲ್ಲಿ ಬೇರೆ ಬೇರೆ ದೇಶಗಳನ್ನು ಪ್ರತ್ಯೇಕವಾಗಿ ವಿಭಿನ್ನ ಬಣ್ಣಗಳಲ್ಲಿ ಚಿತ್ರಿಸಲಾಗಿದೆ. ಅದರಂತೆ ಭಾರತದ ಭೂ ಪಟವನ್ನು ಒಂದು ನಿರ್ಧಿಷ್ಟ ಬಣ್ಣದಲ್ಲಿ ಚಿತ್ರಿಸಲಾಗಿದ್ದರೆ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕ ಬಣ್ಣಗಳಲ್ಲಿ ಚಿತ್ರಿಸಲಾಗಿತ್ತು. ಇದರಿಂದ ಚಕಿತನಾಗಿ ಜಮ್ಮು ಮತ್ತು ಕಾಶ್ಮೀರದ ಚಿತ್ರಗಳನ್ನು ವಿಸ್ತರಿಸಿ ನೋಡಿದಾಗ ಅದರಲ್ಲಿ ಒಂದು ಭಾಗ ಪಾಕಿಸ್ತಾನ ಮತ್ತೊಂದು ಭಾಗ ಚೀನಾದ ಭಾಗವಾಗಿ ಗುರುತಿಸಲಾಗಿದೆ. ಅಲ್ಲದೇ ಮ್ಯಾಪ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಕೋವಿಡ್ ಅಂಕಿ ಸಂಖ್ಯೆಗಳು ಪಾಕಿಸ್ತಾನ ಮತ್ತು ಚೀನಾದ ಕೋವಿಡ್ ಅಂಕಿ ಸಂಖ್ಯೆಗಳೆಂದು ನಮೂದಿಸಲಾಗಿದೆ ಎಂದು ಸಂತನು ಆರೋಪಿಸಿದ್ದಾರೆ.

Home add -Advt

ಅರುಣಾಚಲ ಪ್ರದೇಶವೂ ಪ್ರತ್ಯೇಕ

ಇಷ್ಟೇ ಅಲ್ಲದೆ ಮ್ಯಾಪ್‌ನಲ್ಲಿ ಅರುಣಾಚಲ ಪ್ರದೇಶವನ್ನೂ ಸಹ ಭಾರತದ ಚಿತ್ರಕ್ಕೆ ನೀಡಿರುವ ಬಣ್ಣದ ಹೊರತಾಗಿ ಪ್ರತ್ಯೇಕ ಬಣ್ಣದಿಂದ ಗುರುತಿಸಲಾಗಿದೆ ಎಂದು ಸಂತನು ಆರೋಪಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮ್ಯಾಪ್‌ನಲ್ಲಿ ಆಗಿರುವ ಪ್ರಾಮದದ ಕುರಿತು ಅವರು ಟ್ವಿಟರ್ ಮೂಲಕ ಡಬ್ಲು ಎಚ್ ಒ ಗಮನಕ್ಕೂ ತಂದಿದ್ದಾರೆ.

ಆತಂಕಕಾರಿ ವಿಡಿಯೋ ಮೆಸೇಜ್ ಮಾಡುತ್ತಿದ್ದ 18 ವರ್ಷದ ಯುವತಿಯರ ಬಂಧನ

Related Articles

Back to top button